"ದಿವಾಕರ್ ಅವರ ಪ್ರಬಂಧಗಳನ್ನು ಓದುವುದೆಂದರೆ ಅದೊಂದು ವಿಶ್ವಪರ್ಯಟನೆಯ ಅನುಭವ. ದಿವಾಕರರ ಅಷ್ಟೂ ಆಸಕ್ತಿಗಳು ಅವರ ಪ್ರಬಂಧಗಳಲ್ಲಿ ಇಣುಕುತ್ತವೆ. ಜಗತ್ತಿನ ಉತ್ಕೃಷ್ಟ ಕಾವ್ಯ ,ಚಿತ್ರ,ಸಂಗೀತ ,ಇಷ್ಟದ ಲೇಖಕರು ಪ್ರಬಂಧಗಳಲ್ಲಿ ಬಂದು  ಹೋಗುತ್ತಾರೆ. ಯಾವುದೇ ವಿಷಯ ತೆಗೆದುಕೊಂಡರೂ ಅದನ್ನು ಲೋಕದೃಷ್ಟಿಯಿಂದ ನೋಡುತ್ತಾ,ಜಗತ್ತಿನ ಶ್ರೇಷ್ಠ ಮನಸ್ಸುಗಳ ಸ್ಪಂದನೆಯನ್ನು ದಾಖಲಿಸುತ್ತಾ, ಕನ್ನಡದ ಯಾವುದೋ ಕತೆ,ಕವನ,ಲೇಖಕರನ್ನು ಅದಕ್ಕೆ ಸಂವಾದಿಯಾಗಿಸುತ್ತಾ, ವಿಷಯವನ್ನು ಸರಳವಾಗಿ ಓದುಗನಿಗೆ ಮುಟ್ಟಿಸುವುದು ದಿವಾಕರ್ ಅವರ ಅನನ್ಯ ಶೈಲಿ.ನೂತನ  ಗೃಹದ ಪ್ರವೇಶಕ್ಕೆ ಬಂದ ಗೆಳೆಯನನ್ನು ಕೈ ಹಿಡಿದು ಕರೆದೊಯ್ದು ಇದು ಕೊಠಡಿ, ಹಜಾರ, ಹಿತ್ತಲು, ಎಂದು ಆಪ್ತವಾಗಿ ತೋರಿಸುವಂತೆ ದಿವಾಕರ್ ವಿಶ್ವಸಾಹಿತ್ಯದ ಮೇರುಗಳ ದರ್ಶನ ಮಾಡಿಸುತ್ತಾರೆ . ಜಗತ್ತಿನ ಶ್ರೇಷ್ಠರನ್ನು ಉಲ್ಲೇಖಿಸುವುದಷ್ಟೇ ಅಲ್ಲ. ನಮ್ಮ ನಾಡಿನ ಕವಿ, ಕಲಾವಿದ , ಕತೆಗಾರ, ಫೋಟೋಗ್ರಾಫರ್ ಕೂಡ ಆ ಶೇಷ್ಠರ ಸಾಲಿನಲ್ಲಿ ನಿಲ್ಲಬಲ್ಲರು ಎಂದು ಎತ್ತಿ ಹಿಡಿಯುತ್ತಾರೆ".-ಎಂದು ಹೇಳಿದ್ದಾರೆ ಪ್ರಸಿದ್ದ ಲೇಖಕರಾದ ಸುಧೀಂದ್ರ ಬುಧ್ಯರವರು.

ಎಸ್. ದಿವಾಕರ್

16 other products in the same category:

Product added to compare.