ಎಚ್. ಡುಂಡಿರಾಜ್ ರವರು ತಮ್ಮ ಕೃತಿಯನ್ನು  ಕುರಿತು ಹೀಗೆ ಹೇಳಿದ್ದಾರೆ.

    ಈ ಪುಸ್ತಕ ಏಕೆ ಎನ್ನುವಿರಾ?ಅದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು:

    ೧.ಹನಿಗವನ ಬರೆಯಲು ಆಸಕ್ತಿ ಇರುವವರಿಗೆ ಮತ್ತು ಈಗಾಗಲೇ ಬರೆಯುತ್ತಿರುವ ಹೊಸ ಕವಿಗಳಿಗೆ ಉಪಯೋಗವಾಗುವಂಥ ವಿಷಯಗಳನ್ನು ಸಂಕ್ಷಿಪ್ತವಾಗಿ ತಿಳಿಸುವುದು.

    ೨.ಬರೆಯುವವರಿಗೆ ಮಾತ್ರವಲ್ಲದೆ ಹನಿಗವನಗಳ ಓದುಗರಿಗೆ ಅವುಗಳ ಸ್ವಾರಸ್ಯವನ್ನು ಇನ್ನಷ್ಟು ಚೆನ್ನಾಗಿ ಆಸ್ವಾದಿಸಲು ಅನುಕೂಲವಾಗುವಂಥ ಸಂಗತಿಗಳನ್ನು ಚರ್ಚಿಸುವುದು. 

    ೩.ಹನಿಗವನಗಳ ಬಗ್ಗೆ ಮಾತನಾಡುವವರಿಗೆ ಮತ್ತು ಲೇಖನ ಬರೆಯುವವರಿಗೆ ಅಗತ್ಯವಾದ ಮಾಹಿತಿ ಒಂದೆಡೆ ಸಿಗುವಂತೆ ಮಾಡುವುದು.

ಇದೊಂದು ಅಕಡೆಮಿಕ್ ಶೈಲಿಯ ಪಾಂಡಿತ್ಯಪೂರ್ಣಗ್ರಂಥವಾಗದೆ,ಎಲ್ಲರೂ ಆಸಕ್ತಿಯಿಂದ ಓದಿ ಸುಲಭವಾಗಿ ಅರ್ಥಮಾಡಿಕೊಳ್ಳುವ ಪುಸ್ತಕವಾಗಬೇಕೆಂಬ ದೃಷ್ಟಿಯಿಂದ ಈ ಕೃತಿಯನ್ನು ರಚಿಸಿರುವೆ .ಇದು ಹನಿಗವನಗಳಿಗೊಂದು ಮಿನಿ ಕೈಪಿಡಿ!

ಎಚ್. ಡುಂಡಿರಾಜ್

16 other products in the same category:

Product added to compare.