ಇಪ್ಪತ್ತೈದು ವರ್ಷಗಳ ಸಾರ್ಥಕ ಸೇವೆ

ಆರಂಭ 1995. ಸದಭಿರುಚಿಯ ವೈವಿಧ್ಯಮಯ ಕೃತಿಗಳ ಪ್ರಕಟಣೆ, ಸಾಧ್ಯವಾದಷ್ಟು ಕಡಿಮೆ ಬೆಲೆ, ಉತ್ತಮ ವಿನ್ಯಾಸ, ಉತ್ತಮ ಕಾಗದ ಬಳಕೆ, ಅಚ್ಚುಕಟ್ಟಾದ ಮುದ್ರಣ ಇವು ಅಂಕಿತ ಕೃತಿಗಳ ವೈಶಿಷ್ಟ್ಯಗಳು. ಇಲ್ಲಿಯವರೆಗೆ 788ಕ್ಕೂ ಹೆಚ್ಚು ಮೌಲಿಕ ಕೃತಿಗಳ ಪ್ರಕಟಣೆ.

ಮೊದಲಿನಿಂದಲೂ ಯಾವುದೇ ನಿರ್ದಿಷ್ಟ ವಿಚಾರ/ಚಳುವಳಿಗೆ ಅಂಟಿಕೊಳ್ಳದೆ ಎಲ್ಲ ಬಗೆಯ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿರುವುದು ಅಂಕಿತದ ವಿಶೇಷ. ದಾಖಲೆ ಮೊತ್ತದ ಬಹುಮಾನ ನೀಡಿ `ವಿಜಯ ಕರ್ನಾಟಕ’ ಮತ್ತು `ಕನ್ನಡಪ್ರಭ’ ಪತ್ರಿಕೆಗಳ ಸಹಯೋಗದಲ್ಲಿ ಕಥಾಸ್ಪರ್ಧೆ ಏರ್ಪಡಿಸಿದ್ದು ಮತ್ತು ಅದರಿಂದಾಗಿ ಅನೇಕ ಹೊಸ ಕಥೆಗಾರರು ಬೆಳಕಿಗೆ ಬಂದದ್ದು ಈಗ ಇತಿಹಾಸ. ಕನ್ನಡದಲ್ಲಿ ಮೊದಲ ಬಾರಿಗೆ ವರ್ಣರಂಜಿತ ಪುಸ್ತಕಪಟ್ಟಿ ಪ್ರಕಟಣೆ, ಪ್ರಚಾರ ಪೋಸ್ಟರುಗಳ ಬಳಕೆ, `ಅಂಕಿತ ಪ್ರತಿಭೆ’ ಮಾಲೆಯನ್ನು ಆರಂಭಿಸಿ ಯುವ ಬರಹಗಾರರನ್ನು ಗುರುತಿಸುವ ಪ್ರಯತ್ನ, ಪುಸ್ತಕ ಬಿಡುಗಡೆ - ಲೇಖಕರೊಂದಿಗೆ ಸಂವಾದ ಕಾರ್ಯಕ್ರಮಗಳ ಮೂಲಕ ಪುಸ್ತಕ ಸಂಸ್ಕøತಿಯನ್ನು ಹರಡುವ ಪ್ರಯತ್ನದಲ್ಲಿ ಸತತವಾಗಿ ತೊಡಗುವಿಕೆ - ಇವು ಅಂಕಿತದ ಸಾಧನೆಗಳು. ಪುಸ್ತಕ ವಿನ್ಯಾಸಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಐದು ಬಾರಿ ಪ್ರಶಸ್ತಿ, ಪ್ರಕಾಶನ ಕಾರ್ಯಕ್ಕಾಗಿ ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುರಸ್ಕಾರ, ಉತ್ತಮ ಕೃತಿಗಳ ಪ್ರಕಟಣೆಗಾಗಿ ಮಾಸ್ತಿ ಪ್ರಶಸ್ತಿ, ಕನ್ನಡ ಪರಿಚಾರಿಕೆಗಾಗಿ ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದಿಂದ `ಅತ್ಯುತ್ತಮ ಪ್ರಕಾಶನ' (2014) ಪ್ರಶಸ್ತಿ - ಅಂಕಿತದ ಗರಿಗಳು.

ಕಳೆದ ನಾಲ್ಕು ವರ್ಷಗಳಿಂದÀ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಪ್ರಾರಂಭವಾಗಿರುವ `ಅತ್ಯುತ್ತಮ ಪ್ರಕಾಶನ ಸಂಸ್ಥೆ ಪುರಸ್ಕಾರ’ ಅಂಕಿತದ ಉದ್ಯಮಕಾಳಜಿಯ ದ್ಯೋತಕ.

2019 ರಿಂದ ಕನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಪ್ರಾರಂಭಿಸಲಾಗಿರುವ `ವರ್ಷದ ಅತ್ಯುತ್ತಮ ಲೇಖಕಿ' ಪುರಸ್ಕಾರ ಅಂಕಿತ ಪುಸ್ತಕದ ಮಹಿಳಾಪರ ಕಾಳಜಿಯ ಸಂಕೇತವಾಗಿದೆ.



Product added to compare.