ಹನ್ನೆರಡನೆ ಶತಮಾನದ ವಚನಚಳುವಳಿ ಅಂದಿನ ಸ್ತ್ರೀಯರಿಗೆ ತಂದಿದ್ದ ಆತ್ಮವಿಶ್ವಾಸದ ಪ್ರತೀಕವಾಗಿ ಅಕ್ಕಮಹಾದೇವಿ ಕಾಣಿಸುತ್ತಾಳೆ. ಹೆಣ್ಣಿನ ಸ್ವಾಭಿಮಾನ ಸ್ವಾತಂತ್ರ್ಯಾಪೇಕ್ಷೆಗಳ ಪ್ರತೀಕ ಇವಳು. ಸಮಾಜದಲ್ಲಿನ ಹೆಣ್ಣಿನ ಮೇಲೆ ಹಿಡಿತವನ್ನು ಸಾಧಿಸುವ ಗಂಡು ದರ್ಪಕ್ಕೆ ಅವಳು ತೋರಿದ ಪ್ರತಿಭಟನೆ ಅನ್ಯಾದೃಶವಾದುದು. ತನ್ನ ಧೈರ್ಯದ ಅಭಿವ್ಯಕ್ತಿಯ ಜೊತೆಗೆ ಅತ್ಯಂತ ನವಿರಾದ ಭಾವನೆಗಳಿಗೂ ಸಮರ್ಪಕ ಭಾಷಾ ಪೋಷಾಕನ್ನು ಕೊಟ್ಟು ಕಾವ್ಯವಾಗಿಸುವುದರಲ್ಲಿ ಅಕ್ಕಮಹಾದೇವಿ ಸಮರ್ಥಳಾಗಿದ್ದಾಳೆ. ಆಕೆ ತನ್ನ ನೇರ ನಿಲುವು, ಗಂಭೀರ ರಚನೆಗಳೆರಡರಲ್ಲಿಯೂ ಅದ್ವಿತೀಯಳೆಂದು ಹೇಳಬಹುದು. ಪಿವಿಎನ್ರವರ ಅಭ್ಯಾಸಪೂರ್ಣ ಮುನ್ನುಡಿ ಟಿಪ್ಪಣಿ ಸಹಿತವಾಗಿರುವ ಅಕ್ಕನ ವಚನಗಳ ಅಪೂರ್ವ ಸಂಗ್ರಹವಿದು.

ಡಾ. ಪಿ.ವಿ. ನಾರಾಯಣ

16 other products in the same category:

Product added to compare.