ಎಂ,ಆರ್ ದತ್ತಾತ್ರಿಯವರ 'ಸರ್ಪಭ್ರಮೆ' ಕಾದಂಬರಿ ಸಂದೀಪನ ಹಾಗೂ ಆತ ಸಂಧಿಸಿದ ತಂದೆಯ ಸ್ನೇಹಿತರಾದ ಪ್ರೊ, ಯಾಗಿಯವರ ಜೀವನ ಕಥಾನಕದ ವಿವರಗಳನ್ನು ಚಿತ್ರಿಸುವ ಕೃತಿಯಾದರು ಅಂತರಾಳದಲ್ಲಿ ಹಲವಾರು ತಾತ್ವಿಕವಾದ ಸೂಕ್ಷ್ಮ ಪ್ರಶ್ನೆಗಳನ್ನು ಎತ್ತುವ ಕಥನವಾಗಿರುವುದು ವಿಶೇಷ. ಜೊತೆಗೆ ವಿಶಿಷ್ಟವಾದ ಕಥನ ತಂತ್ರವನ್ನು ಒಳಗೊಂಡು ಗಮನ ಸೆಳೆಯುವ ಮಹತ್ವದ ಕಾದಂಬರಿಯಾಗಿದೆ. 

   ಮನುಷ್ಯ ಹಾಗೂ ಭೌತಿಕ ಜಗತ್ತಿನ ಒಡನಾಟತಂದೊಡ್ಡುವ ಸವಾಲು ಒಂದೆಡೆಯಾದರೆ ಮತ್ತೊಂದೆಡೆ ಮನುಷ್ಯನ ಒಳಮನಸ್ಸಿನ ಆಧ್ಯಾತ್ಮಿಕ ಪಯಣ ಕೂಡ ಅತ್ಯಗತ್ಯ ಅದು ತಂದೊಡ್ಡುವ ಸಂಕಷ್ಟಗಳಂತಹವೆಂಬುದನ್ನು ಗಣಿತ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಕಾದಂಬರಿ ಸೂಕ್ಷ್ಮವಾಗಿ ಚರ್ಚಿಸುತ್ತದೆ. 

     ಜೊತೆಜೊತೆಗೆ ಕತೆಗಾರನ ಕತೆಯ ವ್ಯಾಪ್ತಿಯೇನು  ಎಂದು ಅರಿಯುತ್ತ ಬಾಳಿನ ವಿಮರ್ಶೆಯನ್ನು ನಡೆಸುತ್ತ ಸಾಗುವುದು ಈ ಕತೆಯ ಕ್ರಮ ಗಾಢವಾದ ಪರಿಣಾಮವನ್ನುಂಟುಮಾಡುತ್ತದೆ. 

ಎಂ.ಆರ್ ದತ್ತಾತ್ರಿ

16 other products in the same category:

Product added to compare.