`ಆಸ್ಫೋಟ' ಮತ್ತು `ನಮ್ಮೊಳಗೊಬ್ಬ ನಾಜೂಕಯ್ಯ' ವಿಶಿಷ್ಟ ಅರ್ಥದಲ್ಲಿ ಸಾಮಾಜಿಕ, ಆಧುನಿಕ ನಾಟಕಗಳು. `ಆಸ್ಫೋಟ'ದಲ್ಲಿ ಇಂದಿನ ಭಾರತೀಯನ ಸೋಗಲಾಡಿತನದ ವಿರುದ್ಧ ಸಿಡಿದೆದ್ದಿದ್ದಾರೆ. ಇಲ್ಲಿಯ ಕೋಪ ಹರಿತವಾದ ವ್ಯಂಗ್ಯದ ನೆರವು ಪಡೆದು ವ್ಯಕ್ತವಾಗಿದೆ. `ನಮ್ಮೊಳಗೊಬ್ಬ ನಾಜೂಕಯ್ಯ'ದಲ್ಲಿ ಅನುಭವ ಹೆಚ್ಚು ಪಕ್ವವಾಗಿದೆ. `ಆಸ್ಫೋಟ'ದ ಕೋಪ ಇಲ್ಲಿ ನಾಯಕನ ವ್ಯಕ್ತಿತ್ವದ ವಿಶ್ಲೇಷಣೆಯಾಗಿ ಕಾಣಿಸಿಕೊಂಡಿದೆ. ಇವೆರಡು ನಾಟಕಗಳು ಸಮಕಾಲೀನ ಸಾಮಾಜಿಕ ರಾಜಕೀಯ ಪ್ರಶ್ನೆಗಳನ್ನು ಒಳಗೊಂಡಿದೆ. ಈ ನಾಟಕಗಳ ಕಳಕಳಿ ಮತ್ತು ಒಳತೋಟಿ ಸೀತಾರಾಮ್ ಶ್ರೇಷ್ಠ ನಾಟಕ ಬರೆಯುವ ಭರವಸೆ ನೀಡುತ್ತವೆ.-ಪಿ. ಲಂಕೇಶ್

ಟಿ.ಎನ್.ಸೀತಾರಾಂ

16 other products in the same category:

Product added to compare.