'ಪೆರುವಿನ ಪವಿತ್ರ ಕಣಿವೆಯಲ್ಲಿ' ಪ್ರವಾಸಕಥನದ ಲೇಖಕಿ ನೇಮಿಚಂದ್ರ ಅವರ ಪ್ರಥಮ ಪ್ರವಾಸದ ಕಥನ ಈ 'ಒಂದು ಕನಸಿನ ಪಯಣ' ಸುಮಾರು ಕಾಲು ಶತಮಾನದ ಹಿಂದೆ ಮಹಿಳೆಯರಿಬ್ಬರು, ತಮ್ಮಂತೆ ತಾವು ಇಂಗ್ಲೆಂಡ್ ಮತ್ತು ಯುರೋಪು ಅಲೆದು ಬಂದ ರೋಮಾಂಚನದ ಕತೆ  ಇಲ್ಲಿದೆ. ಅಲ್ಪ ಹಣದಲ್ಲಿ ಅಗಾಧ ಅನುಭವಗಳನ್ನು ಜೋಳಿಗೆಯಲ್ಲಿ ಹೊತ್ತು ಬಂದ ಲೇಖಕಿ 'ಕನಸು ಕಂಡರೆ ಸಾಕು, ಹಾರಲಿಕ್ಕೆ ರೆಕ್ಕೆಗಳು ಮೊಳೆಯುತ್ತವೆ' ಎನ್ನುತ್ತಾರೆ.

            ಈ ಕೃತಿಯ ಲೇಖಕಿ ನೇಮಿಚಂದ್ರ ಕತೆಗಾರ್ತಿಯಾಗಿ, ಅಂಕಣ ಬರಹಗಾರರಾಗಿ ಪರಿಚಿತರು. ಕರ್ನಾಟಕ ಸರ್ಕಾರದ ' ದಾನ ಚಿಂತಾಮಣಿ ಅತ್ತಿಮಬ್ಬೆ' ಪ್ರಶಸ್ತಿ ಪುರಸ್ಕೃತರು. ಇವರ 'ಬೆಳಕಿನೊಂದು ಕಿರಣ ಮೇರಿ ಕ್ಯೂರಿ', ಪೆರುವಿನ ಪವಿತ್ರ ಕಣಿವೆಯಲ್ಲಿ' ಮತ್ತು 'ಯಾದ್ ವಶೇಮ್' ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಡಾ.ಹಾ.ಮಾ.ನಾಯಕ ಪ್ರಶಸ್ತಿ ಪಡೆದ 'ಬದುಕು ಬದಲಿಸಬಹುದು' ಜನಪ್ರಿಯ ಮಾಲಿಕೆಯಾಗಿ ಮುಂದುವರೆದು 'ಸಾವೆ ಬರುವುದಿದ್ದರೆ ನಾಳೆ ಬಾ', 'ಸೋಲೆಂಬುದು ಅಲ್ಪವಿರಾಮ', 'ಸಂತಸ ನನ್ನೆದೆಯ ಹಾಡು ಹಕ್ಕಿ', ಪುಸ್ತಕಗಳು ಹೊರ ಬಂದಿವೆ. 'ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು' ಅಂಕಿತ ಪ್ರಕಾಶನದಿಂದ ಹೊರಬಂದಿದೆ. ಲೇಖಕಿ ವೃತ್ತಿಯಿಂದ ಇಂಜಿನಿಯರ್ .'ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್' ನಲ್ಲಿ ಚೀಫ್ ಡಿಸೈನರ್ ಮತ್ತು ಜನರಲ್ ಮ್ಯಾನೇಜರ್ ಹುದ್ದೆಗಳಲ್ಲಿ ದುಡಿದವರು. 'ಸೊಸೈಟಿ ಆಫ್ ಇಂಡಿಯನ್ ಏರೋಸ್ಪೇಸ್ ಟೆಕ್ನಾಲಜೀಸ್ ಅಂಡ್ ಇಂಡಸ್ಟ್ರೀಸ್'ನ ವಿಮೆನ್ ಆಚೀವರ್ ಇನ್ ಏರೋಸ್ಪೇಸ್' ಪ್ರಶಸ್ತಿ ಪಡೆದ ಇವರು, 'ಏರೋ ಇಂಡಿಯಾ 2019' ರಲ್ಲಿ ಗೌರವಿಸಲ್ಪಟ್ಟಿದ್ದಾರೆ. ವಿಜ್ಞಾನ, ಸಾಹಿತ್ಯ ಮತ್ತು ಮಹಿಳಾ ಅಧ್ಯಯನದಲ್ಲಿ ಲೇಖಕಿಗೆ ಇರುವ ಆಸ್ಥೆಯನ್ನು ಈ ಪ್ರವಾಸ ಕಥನದಲ್ಲಿ ಕಾಣಬಹುದು.

ನೇಮಿಚಂದ್ರ

16 other products in the same category:

Product added to compare.