• New product

'ಓರೆಕೋರೆ ' ಖ್ಯಾತ ಪತ್ರಕರ್ತ ಗಂಭೀರ ಚಿಂತಕ,ತೀಕ್ಷ್ಣ ಮಾತುಗಾರಿಕೆಯ ಲೇಖಕ ಟಿಜೆಎಸ್ ಜಾರ್ಜ್ ಇಂಗ್ಲಿಷ್ನಲ್ಲಿ ಬರೆದ ASKEW ಪುಸ್ತಕದ ಕನ್ನಡಾನುವಾದ.

ಅವರ ಬರಹಗಳು ಕೇವಲ ವಿಮರ್ಶೆಗಳಲ್ಲ- ಅವು ಸಮಾಜದ ಪ್ರಬುದ್ಧ ಮನಸ್ಸಿಗೆ ಎಚ್ಚರಿಕೆಗಳಾಗಿದ್ದವು. ದೇಶದ ಉನ್ನತಾಧಿಕಾರಿಗಳು ಯಾರೇ ಆಗಿರಲಿ, ಯಾವುದೇ ಮುಲಾಜುಗಳಿಲ್ಲದೆ ಸತ್ಯವನ್ನು ಹೇಳುವ ಧೈರ್ಯ ಅವರ ವೈಶಿಷ್ಟ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗೌರವಿಸಲ್ಪಟ್ಟ ಹಿರಿಯ ಪತ್ರಕರ್ತರಾಗಿ ಅವರು ವಿಶಿಷ್ಟ ಸ್ಥಾನವನ್ನು ಗಳಿಸಿದ್ಧರು.

ದೊಡ್ಡ ಬೆಂಗಳೂರಿನ ಸಣ್ಣ ಆತ್ಮಕಥೆಯಾದ  ಈ ಕೃತಿಯಲ್ಲಿ ಬೆಂಗಳೂರನ್ನು ಕುರಿತು ಅವರು ಬರೆದ ಕೆಲವು ಸಾಲುಗಳು ಹೀಗಿವೆ:

ಪ್ರತೀನಗರದಲ್ಲಿ ಅದರದ್ದೇ ಆದ ಆತ್ಮವಿದೆ. ಆಲೋಚಿಸಬಲ್ಲ ಸ್ವಂತ ಮಿದುಳೂ ಇದೆ. ಅವುಗಳದ್ದೇ ಆದ ನೆನಪುಗಳು, ಸ್ಮೃತಿಗಳು, ಕನಸುಗಳಿವೆ. ತಮ್ಮ ಜತೆ ಅವಿನಾಭಾವವಾಗಿ ಸೇರಿಕೊಂಡಿರುವ ಮೌಲ್ಯಗಳು ಮತ್ತು ವಿಶಿಷ್ಟ ಗುಣಶೀಲಗಳಿವೆ. ಪ್ರತಿಯೊಂದು ನಗರವೂ ಜೀವಂತಿಕೆಯಿಂದ ಮಿಡಿಯುವ ಜೀವಸಂಕುಲ.

ಬೆಂಗಳೂರು ಎಲ್ಲವನ್ನು ಹೊಸದಾಗಿ ನೋಡಿತು. ನವಜವ್ವನದಿಂದ ಸಂತಸದಾಟದಿಂದ ಹೊಸದಾಗಿ ಆರಂಭಗೊಂಡಿತು. ಕೇಳಿಯಾಟವಾಡಿತು. ಕೊನೆಗೆ ಹುಚ್ಚಾಟದಿಂದ ಹತಾಶೆಗೆ, ಪತನಕ್ಕೆ ಬಲಿಯಾಯಿತು.

ಕನ್ನಡಕ್ಕೆ: ಪ್ರೊ| ಕೆ.ಈ. ರಾಧಾಕೃಷ್ಣ

16 other products in the same category:

Product added to compare.