ಆರ್ಯಾವರ್ತ- ಎಂಬುದು ಉತ್ತರದ ಸೀಮೆಗಳನ್ನು ಒಳಗೊಂಡಿದ್ದು  ಎಂಬ ಅರ್ಥ ಇರುವಂತೆ; ಶ್ರೇಷ್ಠಾತಿಶ್ರೇಷ್ಠರು ಓಡಾಡಿದ ಸ್ಥಳವೆಂಬ ಅರ್ಥವುಂಟು. ಬುದ್ಧ ಮತ್ತು ಹರ್ಷರಂಥ ಶ್ರೇಷ್ಠರೂ ಮಾನ್ಯರೂ ಇದ್ದದ್ದು ಆರ್ಯಾವರ್ತದಲ್ಲೇ. ಶ್ರೀಮತಿ ಉಷಾ ನರಸಿಂಹನ್ ಶ್ರೀಹರ್ಷವರ್ಧನನನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿಯನ್ನು ರಚಿಸಿದ್ದಾರೆ. ಶ್ರೀಹರ್ಷನು ಬುದ್ಧನ ತತ್ತ್ವಗಳನ್ನು ಒಪ್ಪಿಕೊಂಡವನು. ಅವನ ಕಾಲದಲ್ಲಿ ಚೀನೀ ಪ್ರವಾಸಿಗ ಹ್ಯುಯನ್ ತ್ಸಾAಗ್ ಬಂದಿದ್ದ.ಇಲ್ಲಿಯ ಕಥಾನಕ ಆರನೆಯ ಶತಮಾನದಿಂದ ಏಳನೆಯ ಶತಮಾನದ ಮಧ್ಯಕಾಲಾವಧಿಯನ್ನು ಒಳಗೊಂಡಿದೆ. ಕಾದಂಬರಿಕಾರರು ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ನೆಲೆಗಳನ್ನು ಚಾರಿತ್ರಿಕ ಹಿನ್ನಲೆಯಲ್ಲಿ ಸೃಜನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಕಾದಂಬರಿಯು ಬುದ್ಧನ ಕರುಣೆ-ದಯಾಭಾವವನ್ನು ವ್ಯಂಜಿಸುವಂತೆ; ಮನುಷ್ಯನ ತೀವ್ರ ಕ್ಷೋಭೆ-ಈರ್ಷ್ಯೆಗಳನ್ನು ಪ್ರತಿಮಿಸುತ್ತದೆ. ಕಾದಂಬರಿಕಾರರು ಇತಿಹಾಸದ ವಿವರಗಳನ್ನು ಕಲ್ಪಕತೆಯ ಮೂಸೆಯಲ್ಲಿ ಅದ್ದಿ ನೇಯ್ದಿದ್ದಾರೆ. ಇಲ್ಲಿಯ ವಸ್ತು, ಭಾವ-ಭಾಷೆಗಳೊಡನೆ ಓದುಗರ ಅಂತರಂಗಕ್ಕೆ ನೇರವಾಗಿ ಪ್ರವೇಶಿಸುತ್ತದೆ. ಶ್ರೀಹರ್ಷನನ್ನು ಕುರಿತ ಮೊದಲ ಕನ್ನಡ ಕಾದಂಬರಿ-ಎಂಬುದು ಇದರ ಹೆಚ್ಚುಗಾರಿಕೆ ಮತ್ತು ಹೆಗ್ಗಳಿಕೆ!

                                                                                                                                             ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ 

ಉಷಾ ನರಸಿಂಹನ್

16 other products in the same category:

Product added to compare.