ಮೌನೇಶ ಬಡಿಗೇರ್ ಅವರ ಬರಹಕ್ಕೆ ಸರಳ, ನೇರ, ಸೌಂದರ್ಯದ ಜೊತೆ ಜೊತೆಗೇ ತುಂಟತನದ ಆಯಾಮವೂ ಸೇರಿಕೊಂಡಿವೆ. ಸಲೀಸಾಗಿ ಓದುಗರನ್ನು ಒಳಗೊಳ್ಳುವ ವಿಶೇಷಗುಣಗಳನ್ನು ಹೊಂದಿದೆ. ತಮ್ಮ ಎಲ್ಲ ಕತೆಗಳಲ್ಲೂ ಮೌನೇಶ್ ತಮ್ಮ ಈ ಆಕರ್ಷಕ, ಉಲ್ಲಾಸಕರ ತುಂಟತನದ ಗುಣದಿಂದಾಗಿ, ತಮ್ಮ ಬಹುಪಾಲು ಪಾತ್ರಗಳಲ್ಲಿ,ಅದರಲ್ಲೂ ವಿಶೇಷವಾಗಿ ಹೆಣ್ಣು ಪಾತ್ರಗಳಲ್ಲಿರುವ ವಿಚಿತ್ರ ಮಗ್ಗುಲುಗಳನ್ನೂ, ವಿಶೇಷ ಸ್ವಭಾವಗಳನ್ನೂ ಶೋಧಿಸುತ್ತಾರೆ, ಆ ಮೂಲಕ ಪಾತ್ರಗಳಿಗೆ ಗಟ್ಟಿತನ ತುಂಬುತ್ತ, ಓದುಗರಿಗೆ ಅವರನ್ನು ಆಪ್ತಗೊಳಿಸುತ್ತ ಹೋಗುತ್ತಾರೆ. 

   ಒಬ್ಬ ಒಳ್ಳೆಯ ನಾಟಕಕಾರನಾಗಿ,ಚಿತ್ರಕಾರನಾಗಿ,ದೃಶ್ಯಮಾಧ್ಯಮದ ಸತ್ವವನ್ನು ಮೈಗೂಡಿಸಿಕೊಂಡು ತಮ್ಮ ಸಶಕ್ತ ಕಲ್ಪನಾಶಕ್ತಿಯ ಮೂಲಕ, ಅನೂಹ್ಯ ನಾಟಕೀಯ ಗುಣಗಳನ್ನು ಕಟ್ಟುತ್ತ ತಮ್ಮ ಕತೆಗಳಿಗೆ ದಟ್ಟರಂಗು ನೀಡುತ್ತಾರೆ.

 ಇನ್ನು ಮುಂದೆಯೂ ನಾವು ಅವರಿಂದ ಇಂತಹ ಆಸಕ್ತಿದಾಯಕವಾದ,ಮನಮುಟ್ಟುವ ಹಾಗೂ ಬಹುಕಾಲ ನೆನೆಪಿನಲ್ಲುಳಿಯುವ ಕತೆಗಳನ್ನು ನಿರೀಕ್ಷಿಸಬಹುದು ಎಂದು ನಿಸ್ಸಂಶಯವಾಗಿ ಹೇಳಬಹುದು. 

                                                                                                                                                                                                     - ಮುಕುಂದರಾವ್ 

ಮೌನೇಶ ಬಡಿಗೇರ

16 other products in the same category:

Product added to compare.