ಹದಿನಾರನೇ ಶತಮಾನದ ಪೋರ್ಚುಗೀಸ್ ಯುದ್ಧಪರಿಣಿತನ ಬಗ್ಗೆ ಇತ್ತೀಚಿಗೆ ರಚಿಸಲಾಗಿರುವ ಒಂದು ಪ್ರಸಿದ್ಧ ಪ್ರೇಮಗೀತೆಯ ಸತ್ಯಾಸತ್ಯತೆಯನ್ನು ಸಂಶೋಧಿಸಲೆಂದು, ಆ ದೇಶದ ಸ್ನಾತಕೋತ್ತರ ವಿದ್ಯಾರ್ಥಿನಿ ಮಾರಿಯಾ, ಮೈಯನ್ಮಾರ್ ಗೆ ಬಂದಾಗ ಅಪರಿಚಿತ ಗುಂಪೊಂದು ಆಕೆಯನ್ನು ಅಪಹರಿಸುತ್ತದೆ. 

ಪಲ್ಲವರ ರಾಜನಿಗೆ ಕಾಂಬೋಡಿಯಾದ ಖ್ಮೆರ್ ಸಾಮ್ರಾಜ್ಯದ ರಾಜನೊಬ್ಬ ಕೊಡುಗೆಯಾಗಿ ಕಳುಹಿಸಿದ್ಧ ಬಂಗಾರದ ರಥದ ಮೇಲೆ ಅಂತಾರಾಷ್ಟ್ರೀಯ ಕಳ್ಳರ ಗಮನ ಹರಿದಿರುವ ಸುದ್ದಿಯ ಹಿನ್ನಲೆಯಲ್ಲಿ ಭಾರತದ ಸರಕಾರ ಪೂಜಾಳನ್ನು ಒಂದು ರಹಸ್ಯ ಕಾರ್ಯಾಚರಣೆಗೆಂದು ಆಗ್ನೇಯ ಏಷ್ಯ ದೇಶಗಳಿಗೆ ಕಳುಹಿಸಲು ಅನುವಾಗುತ್ತದೆ.

ಅಷ್ಟರಲ್ಲಿ ಕಾಂಬೋಡಿಯಾದ ಕಾಡಿನಲ್ಲಿದ್ದ ಒಂದು ಪಗೋಡದಲ್ಲಿ ಹಲವು ಬೌದ್ಧಬಿಕ್ಕುಗಳ ಮಾರಣಹೋಮ ನಡೆದಿರುವ ಸುದ್ದಿ ಭಾರತದ ವಿದೇಶಾಂಗ ಕಚೇರಿಗೆ ತಲುಪುತ್ತದೆ. ಪರಿಣಾಮವಾಗಿ ಪೂಜಾಳ ಶೋಧದ ದಿಕ್ಕೇ ಬದಲಾಗುತ್ತದೆ.

ಆ ಎಲ್ಲಾ ಘಟನೆಗಳೂ ಭಾರತದಿಂದ ಪಯಣಿಸಿದ್ದ  ಬುದ್ಧನ ಅಭೂತಪೂರ್ವ ಶಿಲ್ಪವೊಂದರ ಚರಿತ್ರೆಯ ಸುತ್ತ ಬೆಸೆದುಕೊಂಡಿರುವ ಸತ್ಯ ತೆರೆದುಕೊಂಡಂತೆ, ಪೂಜಾ ಮತ್ತು ಮಾರಿಯಾ ಒಟ್ಟಾಗಿ ಅದರ ರಹಸ್ಯವನ್ನು ಭೇದಿಸತೊಡಗುತ್ತಾರೆ. ಆ ಹುಡುಕಾಟಗಳ ಮೂಲಕ ಭಾರತೀಯತೆಯ ಜಾಗತಿಕ ಪಯಣದ ಅದ್ಭುತ ಚರಿತ್ರೆ ಅನಾವರಣಗೊಳ್ಳುತ್ತದೆ. 

                                                                                                                                                                                                 ಕೆ.ಎನ್. ಗಣೇಶಯ್ಯ

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.