ಕೈಲಾಸಂ ಬದುಕಿದ್ದಾಗಲೇ ದಂತಕತೆಯಾದವರು-ತಮ್ಮ ಆಯಸ್ಕಾಂತ ವ್ಯಕ್ತಿತ್ವದಿಂದ ಹಾಗೂ ಉಜ್ವಲವಾದ ಪ್ರತಿಭೆಯಿಂದ "ನಿಂತ ಕಡೆ ಸಂತೆ ಸೇರಿಸಬಲ್ಲ ವ್ಯಕ್ತಿ''ಯಾಗಿದ್ದ ಕೈಲಾಸಂ ಓದಿದ್ದು ಭೂಗರ್ಭಶಾಸ್ತ್ರವನ್ನು:ಆದರೆ ಬರೆದಿದ್ದು- ಬರೆದದ್ದು ಅಲ್ಲ, ಒರೆದದ್ದು ನಾಟಕಗಳನ್ನು;ಇಂಗ್ಲೆಂಡಿನ ರಾಯಲ್ ಜಿಯಾಲಾಜಿಕಲ್ ಸೊಸೈಟಿಯ 'ಫೆಲೋ' ಗೌರವವನ್ನು ಪಡೆದ ಪ್ರಥಮ ಭಾರತಿಯರಾದರೂ,ಅನಾಯಾಸವಾಗಿ ಇನ್ನೂ ಉನ್ನತ ಹಂತಕ್ಕೆ ಏರಬಹುದಾದಂತಹ ನೌಕರಿ ದೊರೆತರೂ,ಅದಕ್ಕೆ ಕೇವಲ ಐದೇ ವರ್ಷಗಳಲ್ಲಿ ತಿಲಾಂಜಲಿ ಕೊಟ್ಟು,ತನ್ನೊಳಗಿನ ನಾಟಕಕಾರನ ಕರೆಗೆ ಓಗೊಟ್ಟು,ಏಕಾಂತದ ಹಾಗೂ ಬವಣೆಯ ಬದುಕನ್ನು ಒಪ್ಪಿಕೊಂಡರು.ಅನಂತರ ಎರಡು ದಶಕಗಳ ಕಾಲ,ನಾಟಕಗಳನ್ನು ನೋಡುತ್ತ,ನಾಟಕಗಳನ್ನು ಹೇಳುತ್ತ,ನಾಟಕಗಳನ್ನು ಮಾಡುತ್ತ ಕನ್ನಡ ರಂಗಭೂಮಿಯಲ್ಲಿ ಒಂದು ಕ್ರಾಂತಿಯನ್ನೇ ತಂದವರು ಕೈಲಾಸಂ .

 ಇಂಥ ವ್ಯಕ್ತಿತ್ವವೊಂದರ ಜೀವನ ಹಾಗೂ ಕೃತಿಗಳನ್ನು ಕುರಿತು,ಪ್ರೊ .ಅ.ರಾ.ಮಿತ್ರ ಅವರು ಅತ್ಯಂತ ಲವಲವಿಕೆಯಿಂದ ಬರೆದ ಈ ಕೃತಿ ಅತ್ಯಂತ ಸಕಾಲಿಕವೂ ಆಗಿದೆ .

ಅ.ರಾ. ಮಿತ್ರ

16 other products in the same category:

Product added to compare.