• Out-of-Stock

ಈ ವಿಚಿತ್ರ ಪ್ರಾಣಿಗೆ ತನ್ನ ದೇಹದಷ್ಟೇ ಉದ್ದದ ನಾಲಗೆ ಇದೆ! ಯಾಕೆ ಅದಕ್ಕೆ ಅಷ್ಟುದ್ದದ ನಾಲಗೆ ಬೇಕು? ಚಿಪ್ಪುಹಂದಿ ಹೆಸರಿನ ಈ ಪ್ರಾಣಿಯ ಬಗ್ಗೆ ಇನ್ನೂ ಎಷ್ಟೋ ಕೌತುಕದ ಸಂಗತಿಗಳಿವೆ. ಇದು ಪೋ ಹೆಸರಿನ ಚಿಪ್ಪುಹಂದಿ ಮರಿಯ ಕತೆ. ಸಂಜೆ ಇದು ಆಹಾರ ಹುಡುಕುತ್ತ ಹೊರಟಾಗ ದೊಡ್ಡ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತದೆ. ಪಾರಾಗಿ ಬರಬೇಕೆಂದರೆ ಅದು ಏನೇನು ತಂತ್ರ ಹೂಡುತ್ತದೆ? ಇದರಲ್ಲಿ ಅದೇ ಕತೆ ಇದೆ, ಓದಿ ನೋಡಿ! ನಾಗೇಶ ಹೆಗಡೆಯವರು ಅನುವಾದಿಸಿರುವ ಆಕರ್ಷಕ ಬಣ್ಣದ ಚಿತ್ರಗಳಿಂದ ಕೂಡಿರುವ ಈ ಪುಸ್ತಕ ಮಕ್ಕಳ ಮನಸ್ಸನ್ನು ಖಂಡಿತ ಸೆಳೆಯುತ್ತದೆ.

ಅನು:ನಾಗೇಶ ಹೆಗಡೆ

16 other products in the same category:

Product added to compare.