ಕಳೆದ ಶತಮಾನದ ಪೂರ್ವಾರ್ಧದಲ್ಲಿ ಆರಂಭವಾಗಿ, ಉತ್ತರಾರ್ಧದಲ್ಲಿ ಕೊನೆಗೊಳ್ಳುವ ನಡುವಿನ ಸುಮಾರು ಐವತ್ತು ವರ್ಷಗಳ ಕಥಾ ಜಗತ್ತು ದೀಪಾ ಜೋಶಿಯವರ ಈ ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತಾ ಹೋಗುವ ರೀತಿ ಅನನ್ಯವಾದುದು. ಉತ್ತರ ಕರ್ನಾಟಕದ ರಾಣೆಬೆನ್ನೂರು ಕೇಂದ್ರವಾಗುಳ್ಳ ಮಾಧ್ವ ವೈದಿಕ ಕುಟುಂಬವೊಂದರ ಬದುಕಿನ ಹೋರಾಟದ ಕಥೆ ಇಲ್ಲಿದೆ.

 ಹುಚ್ಚಾಚಾರ್ರ ಸಾವಿನ ಸನ್ನಿವೇಶದಿಂದ ಆರಂಭವಾಗುವ ಈ ಕಥಾನಕವು, ಅವರ ಮಗ ಭುಜಂಗಾಚಾರ್ರು ಬದುಕಿನ ಏಳುಬೀಳುಗಳ ಹೋರಾಟದಲ್ಲಿ, ಸುದೀರ್ಘ ಬಾಳ ಯಾತ್ರೆಗಳಲ್ಲಿ, ತೀವ್ರ ಬಡತನ, ಸಾವು, ದುಃಖ, ಒದ್ದಾಟಗಳನ್ನು ಎದುರಿಸುತ್ತಾ ಆ ಕುಲುಮೆಯಲ್ಲಿ ಬೆಂದು ಮಾಗುತ್ತಾ ಎಂದೂ ಸಹನೆಯನ್ನು ಕಳೆದುಕೊಳ್ಳದೆ ಘನತೆಯಿಂದ ಬಾಳುತ್ತಲೇ ಸ್ಥಿತಪ್ರಜ್ಞ ಸ್ಥಿತಿಗೆ ತಲುಪುವ ಹಂತದಲ್ಲಿ ಅಂತ್ಯವಾಗುತ್ತದೆ.

ಕಳೆದು ಹೋದ ಕಾಲಘಟ್ಟವೊಂದನ್ನು ಪುನರ್ ಸೃಷ್ಟಿಸುವ ಕಾರ್ಯದಲ್ಲಿ ದೀಪಾ ಜೋಶಿಯವರು ತೋರಿದ ಸಂಯಮ, ಆ ಕಾಲದ ಶಾಸ್ತ್ರಗಳು, ರೀತಿ ರಿವಾಜುಗಳು, ಸಾಮಾಜಿಕ ಸ್ಥಿತಿಗತಿಗಳು ....ಮೊದಲಾದ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿ, ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ದಾಖಲಿಸಿದ ರೀತಿ ಅಪರೂಪದ್ದು.

 ತಮ್ಮ ಈ ಪ್ರಥಮ ಕಾದಂಬರಿಯ ಬರವಣಿಗೆಯಲ್ಲೇ ಅವರು ಪಕ್ವತೆಯನ್ನು ಸಾಧಿಸಿರುವ ರೀತಿಯು ವಿಸ್ಮಯಕಾರಿಯಾದದ್ದು.

 ನಿಸ್ಸಂದೇಹವಾಗಿ ಈ ಕಾದಂಬರಿಯು ಈಚೆಗೆ ಬಂದ ಪ್ರಮುಖ ಕೃತಿಗಳ ಪೈಕಿ ಒಂದು ಎಂದು ಹೇಳಬಹುದು.

ದೀಪಾ ಜೋಶಿ

16 other products in the same category:

Product added to compare.