ಪ್ರೊ.ಮಲ್ಲೇಪುರಂ ಹುಟ್ಟಿನಿಂದ ಶ್ರೀಮಂತರಲ್ಲ.ಸಿದ್ಧಗಂಗಾ  ಮಠದಲ್ಲಿ ಓದಿ, ಮನೆಯವರ ಬೆಂಬಲವಿಲ್ಲದೆ ತಮ್ಮ ಬದುಕನ್ನು ತಾವೇ ರೂಪಿಸಿಕೊಂಡವರು, ಸ್ನೇಹಿತರು ಅವರಿಗೆ ಬೆಂಬಲವಾಗಿ ನಿಂತರು.ಮೂಲತಃ ಮಲ್ಲೇಪುರಂ ಅಸಾಮಾನ್ಯ ಪ್ರತಿಭಾವಂತರು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅವರು ಗಳಿಸಿದ ಪಾಂಡಿತ್ಯ ಅವರ ಸಮಾಜದವರನ್ನೇ ಅಚ್ಚರಿಗೊಳಿಸಿತು. ಶಾಲಾ ಮಾಸ್ತರರಿಂದ ಕುಲಪತಿಯಾಗುವ ವರೆಗೆ ಹುದ್ದೆಗಳೇ ಅವರನ್ನು ಬೆಂಬತ್ತಿ ಬಂದವು. ಅಜಾತ ಶತ್ರುವಾಗಿ ಸದಾ ಮುಗುಳ್ನಗುತ್ತಾ ಯಾರೊಂದಿಗೂ ವಿರಸ ಕಟ್ಟಿಕೊಳ್ಳದೆ ಎಲ್ಲರೊಂದಿಗೂ ಅನ್ಯೋನ್ಯತೆ ಸಾಧಿಸಿರುವುದೇ ಮಲ್ಲೇಪುರಂ ಅವರ ಹೆಗ್ಗಳಿಕೆ.

ಸಾಮಾನ್ಯವಾಗಿ ಆತ್ಮಕಥನಗಳು ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುತ್ತಾ, ತಾವು ಮಾಡಿದ್ದೆಲ್ಲಾ ಸರಿ ಎಂಬ ಭಾವನೆಯನ್ನು ಉಂಟುಮಾಡುತ್ತವೆ.ಆದರೆ ಮಲ್ಲೇಪುರಂ ಕಥನ ಖುಲ್ಲಂ ಖುಲ್ಲಾ. ಸಾಂಸಾರಿಕ ವಿಷಯವೇ ಇರಲಿ,ವೃತ್ತಿ ಕಥಾನಕವೇ ಇರಲಿ, ಎಲ್ಲವನ್ನೂ ಓದುಗರ ಮುಂದೆ ತೆರೆದಿರಿಸಿದ್ದಾರೆ. ತಮಗೆ ನೆರವಾದವರನ್ನು ತುಂಬು ಹೃದಯದಿಂದ ಸ್ಮರಿಸುತ್ತಾರೆ. ಇರಿಸು ಮುರಿಸು ಮಾಡಿದವರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಸತತ ಓದುಗಾರಿಕೆ, ಪರಿಶ್ರಮ, ಸಾಹಿತ್ಯ, ಸಂಗೀತ - ಹೇಗೆ ಒಬ್ಬ ವ್ಯಕ್ತಿಯ ಆರೋಗ್ಯಕರ ಮನಃಸ್ಥಿತಿಗೆ ಇಂಬಾಗಿರಬಲ್ಲುದೆಂಬುದನ್ನು ಮಲ್ಲೇಪುರಂ ಕಥನ ಸಾಬೀತು ಪಡಿಸುತ್ತದೆ. ಅಲಕ್ಷಿತ ವರ್ಗದಿಂದ ಬಂದು, ಕುಲಪತಿಯಂತಹ ಉನ್ನತ ಹುದ್ದೆಗೆ ಏರಿದ ಮಲ್ಲೇಪುರಂ ಆತ್ಮಕಥನ  ಅನೇಕರ ಬದುಕಿಗೆ ಸ್ಪೂರ್ತಿಯಾಗಬಲ್ಲದು.

                                                                                                                                                                                               -ಪ್ರಕಾಶ್ ಕಂಬತ್ತಳ್ಳಿ 

ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ

16 other products in the same category:

Product added to compare.