"ಗಿರಿಜಮ್ಮ ಕನ್ನಡದ ಅತ್ಯುತ್ತಮ ರಂಗನಟಿಯರಲ್ಲಿ ಒಬ್ಬರು. ನಟನೆಯಲ್ಲಿ ಲೋಕೇಶನಂತೆ ತಮ್ಮದು ಒಂದು ಶೈಲಿಯನ್ನು ಸೃಷ್ಟಿಸಿಕೊಂಡು ರಂಗಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತು ಚರಿತ್ರೆ ನಿರ್ಮಿಸಿಕೊಂಡವರು. ದಿನಕ್ಕೆ ನಾಲ್ಕು ನಾಟಕಗಳ ನಾಲ್ಕು ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದು ಆಗ ಅಂಥ ಎನರ್ಜಿ ಇತ್ತು. ಅನಿವಾರ್ಯತೆಯೂ ಇತ್ತು. ಹೊಟ್ಟೆ ಎಲ್ಲವನ್ನೂ ಕಲಿಸುತ್ತದೆ. ಎಷ್ಟು ಬೇಕಾದರೂ ದುಡಿಸುತ್ತದೆ. ತಪಸ್ವಿನಿ ಗಿರಿಜಮ್ಮನ ಮಾತುಗಳಿವು. ಸಾಮಾನ್ಯವಾಗಿ ಆತ್ಮಚರಿತ್ರೆಗಳೆಂದರೆ ಸತ್ಯ ಹೇಳುವ ನೆಪದಲ್ಲಿ ತಮ್ಮನ್ನು ತಾವು ವೈಭವಿಸಿಕೊಳ್ಳುವ ಆತ್ಮಪ್ರಶಂಸೆಗಳಾಗಿರುತ್ತವೆ. ಆಶ್ಚರ್ಯವೆಂದರೆ ಇಲ್ಲಿಯ ಸಾಕ್ಷಿಪ್ರಜ್ಞೆ ತನ್ನನ್ನು ತಾನು ನಿಯಂತ್ರಿಸಿಕೊಂಡ ಕ್ರಮ. ತಾನೊಬ್ಬ ಸಾಮಾನ್ಯ ನಟಿ, ಮಡದಿ, ತಾಯಿ ಎಂಬ ಪ್ರಜ್ಞೆ ಅವರನ್ನು ದಾರಿ ತಪ್ಪಿಸಿಲ್ಲ. ಆದ್ದರಿಂದಲೇ ಇದು ಇಷ್ಟೊಂದು ಸೊಗಸಾದ ಆತ್ಮಚರಿತ್ರೆಯಾಗಿರೋದು- ಎಂದು ಹೇಳಿದ್ದಾರೆ ಪ್ರಸಿದ್ದ ಲೇಖಕರಾದ ಚಂದ್ರಶೇಖರ ಕಂಬಾರರು."

ಜೋಗಿ

16 other products in the same category:

Product added to compare.