ಎಲ್ಲಿಯವರೆಗೆ ಜಾನಪದ ಸಂಸ್ಕೃತಿಗೆ ಕಲೆಯು ಅಗತ್ಯವಿದೆಯೋ, ಎಲ್ಲಿಯವರೆಗೆ ಅದು ಜಾನಪದದ ಸಂಸ್ಕೃತಿಯಾಗಿರುತ್ತದೆಯೋ  ಅಲ್ಲಿಯವರೆಗೆ ಕಲೆಯು ಮುಂದುವರೆಯುತ್ತದೆ.

ಮುಂಗೋಳಿ ಕೂಗ್ಯಾವು ಮೂಡಣ ಬೆಳಗಿ | 

ತಂಗಾಳಿ ಬೀಸ್ಯಾವು ತವರೀ ಹೂವರಳಿ ||

ಹೂಹೂವಿನೊಳಗೊಂದು ಕೈಲಾಸವರಳ್ಯಾವು  | 

ಕೈಲಾಸ ಹಾಡ್ಯಾವು ಏನಂತ ತಾಯೇ | 

ಸಾವಿರದ ಶರಣವ್ವ ಕನ್ನಡದ ತಾಯೇ ||

ಅನೇಕ ವರ್ಷಗಳ ಹಿಂದೊಮ್ಮೆ ತೋಂಡಿಯಾಗಿದ್ದ ಈ ಕತೆಗಳನ್ನು ನಾಟಕವಾಗಿಸಿ ದೂರದರ್ಶನದಲ್ಲಿ, ಸುಮಾರು ಹದಿನೈದುವಾರ ತೋರಿಸಲಾಗಿತ್ತು. ಆಗ ಸನ್ಮಾನ್ಯ ಶಿವರುದ್ರಪ್ಪನವರು, ಅನಂತಮೂರ್ತಿ ಅವರಂಥ ಹಿರಿಯರು ನಿರೂಪಕರಾಗಿದ್ದರು. ಅವುಗಳನ್ನೇ ನಾಟಕ ರೂಪದಲ್ಲಿ "ಸಾವಿರದ ಶರಣವ್ವ ಕನ್ನಡದ ತಾಯೇ" ಎಂದು ಹೆಸರಿಸಿ  ನಿಮ್ಮ ಕೈಗಿಡುತ್ತಿದ್ದೇನೆ.

                                                                                                                                                                                       - ಚಂದ್ರಶೇಖರ ಕಂಬಾರ

ಚಂದ್ರಶೇಖರ ಕಂಬಾರ

16 other products in the same category:

Product added to compare.