ಭಾಷೆ,ಸಂವೇದನೆ ಮತ್ತು ವಸ್ತುವಿನ ಆಯ್ಕೆಯಲ್ಲಿ ಅತ್ಯಂತ ವಿಶಿಷ್ಟವಾಗಿರುವ ಜಯಂತರ ಕಥನಲೋಕದ ವಿಸ್ತಾರ ದೊಡ್ಡದು.ಯಾವ ಖಾನೆಗಳಲ್ಲಿ ಕೂರಿಸಿದರು ಅದು ನುಸುಳಿಹೋಗುತ್ತದೆ. ಜಯಂತ ಸೃಷ್ಟಿಸಿದ ಇಂಥ ಸಂಕೀರ್ಣ ಪ್ರಪಂಚವನ್ನು ನಾನಾ ಮಗ್ಗಲುಗಳಿಂದ,ಹಲವು ಉಪಾಯಗಳಿಂದ,ಪಾತ್ರ-ಸನ್ನಿವೇಶಗಳ ಕೋನದಿಂದ,ಮುಂಬೈ-ಗೋಕರ್ಣದ ಹಿನ್ನೆಲೆಯ ಮುಖೇನ ಪಡೆಯಲು ಮಮತಾ ಪ್ರಯತ್ನಿಸಿದ್ದಾರೆ.ಹೀಗೆ ಹುಡುಕುತ್ತ,ಹೊಸದಾಗಿ ಕಂಡದ್ದರ ಬಗ್ಗೆ ಬೆರಗು ಪಡುತ್ತ,ತಾವು ಕಂಡದ್ದನ್ನು ನಮಗೂ ಕಾಣಿಸಬೇಕೆನ್ನುವ ಸಹೃದಯತೆಯ ನಿಲುವಿನಲ್ಲಿ ಈ ಕೃತಿ ಹುಟ್ಟಿಕೊಂಡಿದೆ.ಇದೆಲ್ಲದರ ಜೊತೆಗೆ ಜಯಂತರೊಡನೆಯ ಸಂದರ್ಶನವು ಈ ಲೇಖನ ಜಗತ್ತಿನ ಕುರಿತು ಹಲವು ಸೂಕ್ಷ್ಮ ಗ್ರಹಿಕೆಗಳನ್ನು ಒದಗಿಸುತ್ತದೆ.

   ಓದುಗ,ಲೇಖಕ,ವಿಮರ್ಶಕ ಈ ತ್ರಿಕೋನ ಸಂಭಂಧವನ್ನು ಧ್ವನಿಪೂರ್ಣವಾಗಿ ಮೀಟಿರುವುದು ಇಲ್ಲಿಯ ಸಾಧನೆ.

                                                                                                  - ವಿವೇಕ ಶಾನಭಾಗ 

ಡಾ. ಮಮತಾ ರಾವ್

16 other products in the same category:

Product added to compare.