"ಎಲ್. ಹನುಂಮತಯ್ಯ ಅವರ ಬರವಣಿಗೆಯ ಧಾಟಿ ಮೆಚ್ಚುಗೆ ಹುಟ್ಟಿಸುತ್ತದೆ. ಸ್ಪಷ್ಟತೆ ಹಾಗೂ ಪ್ರಖರತೆಗಳು ಇವರ ಬಹುಪಾಲು ಲೇಖನಗಳ ಸತ್ವವಾಗಿವೆ. `ಸಾಹಿತ್ಯಚಿಂತನೆ' ಭಾಗದಲ್ಲಿ ಇರುವ ಸಾಹಿತ್ಯ ಪರಿಶೀಲನಾ ಲೇಖನಗಳ ಹರಹು ಮತ್ತು ನಿಲುವುಗಳು ಮೆಚ್ಚುಗೆ ಹುಟ್ಟಿಸುತ್ತವೆ. ಇಲ್ಲಿ ಪರಿಚಯಾತ್ಮಕ ಬರವಣಿಗೆಯ ಲೇಖನಗಳಿಗಿರುವಂತೆಯೇ ಆಶಯಗಳ ಪ್ರತಿಪಾದನೆ ಮಾಡುವ ಲೇಖನಗಳೂ ಇವೆ. `ಬೂದಿ ಮುಚ್ಚಿದ ಕೆಂಡ ಒಳ ಮೀಸಲಾತಿ', `ದಲಿತರು ಮತ್ತು ಹಿಂದುಳಿದ ವರ್ಗ', `ಆಧುನಿಕತೆ ಮತ್ತು ಮಾನವೀತೆಯ', `ಹಿಂಸೆ-ಅಹಿಂಸೆಯ ನಡುವೆ' ಮುಂತಾದ `ಸಮಾಜ-ಸಂಘರ್ಷ' ಭಾಗದಲ್ಲಿರುವ ಲೇಖನಗಳು ನಮ್ಮನ್ನು ವಾಸ್ತವಿಕ ಸತ್ಯದೆದುರು ನಿಲ್ಲಿಸಿ, ಆಲೋಚಿಸುವಂತೆ, ಖಚಿತ ನಿಲುವು ತಳೆಯುವಂತೆ ಪ್ರೇರೇಪಿಸುತ್ತವೆ."-ಡಾ. ಬಂಜಗೆರೆ ಜಯಪ್ರಕಾಶ.

ಡಾ. ಎಲ್. ಹನುಮಂತಯ್ಯ

16 other products in the same category:

Product added to compare.