" `ಕೇಫ'ರ ನಿಜವಾದ ಹೆಸರು ಎ.ವಿ. ಕೇಶವಮೂರ್ತಿ. ಕನ್ನಡ ಹಾಸ್ಯ ಬರಹಗಾರರಲ್ಲಿ ಕೊರವಂಜಿಯ ಹಾಗೆ ಇದ್ದಕ್ಕಿದ್ದಂತೆ ಮರೆಗೆ ಸರಿದುಹೋದ ಏಕೈಕ ವ್ಯಕ್ತಿ ಎಂದರೆ ಕೇಫರೇ ಇರಬೇಕು. ಅವರು ತಮ್ಮ ಸಮಕಾಲೀನರಲ್ಲಿ ಯಾರೊಬ್ಬರಂತೆಯೂ ಬರೆಯದೆ, ತಮಗೇ ವಿಶಿಷ್ಟವಾದ, ಕನ್ನಡದ ಮಟ್ಟಿಗಂತೂ ತೀರಾ ಸ್ವೋಪಜ್ಞವಾದ, ಹಾಸ್ಯ ಶೈಲಿಯನ್ನು ರೂಢಿಸಿಕೊಂಡವರು. ಮಧ್ಯಮವರ್ಗವು ಇಂಗ್ಲಿಷ್ ವಿದ್ಯಾಭ್ಯಾಸದಿಂದ ಗಳಿಸಿಕೊಂಡ ಹೊಸ ಜೀವನ ಶೈಲಿ, ಇರುವುದರಲ್ಲೇ ತೃಪ್ತಿಪಡುವ ಮನೋಧರ್ಮ, ಜಾತಿ, ಧರ್ಮಗಳನ್ನು ಮೀರಿದ ಉದಾರಮನಸ್ಸು, ಮಾನವೀಯತೆಯನ್ನು ಮರೆಯದ, ಕೆಡುಕಿನ ಲವಲೇಶವಿಲ್ಲದ, ಅಸೂಯೆ ಎಂದರೇನೆಂದು ಅರಿಯದ ಮುಗ್ಧತೆ, ಎಲ್ಲಕ್ಕಿಂತ ಮಿಗಿಲಾಗಿ ಧಾವಂತವಿಲ್ಲದ ಬದುಕು, ಕಾಲ ಸರಿದು ಹೋಗುತ್ತಿದೆಯಲ್ಲ ಎಂಬ ಪರಿವೆಯಿಲ್ಲದ, ಆತಂಕರಹಿತ ನಿರಾಳತೆ - ಇವು ಅವರ ಹಾಸ್ಯಪ್ರಜ್ಞೆಯ ಹಿಂದಿರುವ ಮನೋಧರ್ಮ".-ಎಸ್. ದಿವಾಕರ್ ಕೇಫರವರ ವಿಶಿಷ್ಟ ನಗೆ ಬರಹಗಳ ಸಂಗ್ರಹ.

ಸಂ:ಎಸ್. ದಿವಾಕರ್

16 other products in the same category:

Product added to compare.