ಜೋಗಿಯವರ ಹೊಸ ಕಾದಂಬರಿ 'ದಕ್ಷಿಣಾಯನ'ವು, ನಾಡಿನಲ್ಲಿ ಈಚೆಗೆ ನಮ್ಮ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ದಕ್ಷಿಣ ಕನ್ನಡದ ಹಿನ್ನಲೆಯಲ್ಲಿ ಪರಿಶೀಲಿಸುತ್ತದೆ.ಈ ಕಾದಂಬರಿಯ ಕಥೆಯು ಹಳೆ ದಕ್ಷಿಣ ಕನ್ನಡದ ಬದಲಾಗಿ ನಂತರದ ಹೊಸ ತಲೆಮಾರಿನ ಸಮುದಾಯದ ದಕ್ಷಿಣ ಕನ್ನಡದ ಕಥೆಯನ್ನು ಒಳಗೊಂಡಿದೆ. ಪ್ರಶಾಂತ ಕೊಳದಂತಿದ್ದ ಇಲ್ಲಿನ ಜನಜೀವನದಲ್ಲಿ ಬದಲಾವಣೆಯ ಅಲೆಗಳೇಳತೊಡಗಿದ್ದು ಈಚಿನ ವರ್ಷಗಳಲ್ಲಿ. ಹಿಂದೆ ಧರ್ಮ ಮತ್ತು ರಾಜಕಾರಣವು ಬೇರೆ ಬೇರೆಯೇ ಆಗಿದ್ದು ಈಚೆಗೆ ಇಲ್ಲಿ,ಸಂವಿಧಾನಾಧರಿತ ರಾಜಕಾರಣದ ಬದಲಾಗಿ ಧರ್ಮಾಧರಿತ ರಾಜಕಾರಣದ ಶಕೆ ಆರಂಭವಾಯಿತು. ಅದರಿಂದಾಗಿಯೇ ಹಿಂದಿನ ಕೋಮು ಸೌಹಾರ್ದಕ್ಕೆ ಬದಲಾಗಿ ನಿಧಾನವಾಗಿ ಕೋಮು ಸಂಘರ್ಷ ಎಂಬ ವಿಷವು ಹರಡತೊಡಗಿತು. ಇದರ ಪರಿಣಾಮವಾಗಿ ಜನ ಸಮುದಾಯದ, ಕುಟುಂಬದ ಮಾತ್ರವಲ್ಲ ವ್ಯಕ್ತಿಯ ವ್ಯಕ್ತಿತ್ವದಲ್ಲೂ ಬಿರುಕುಗಳು ಕಾಣಿಸಿಕೊಂಡವು. ಆಧುನಿಕ ತಂತ್ರಜ್ಞಾನಗಳು,ಮುಖ್ಯವಾಗಿ ಸೋಷಿಯಲ್ ಮೀಡಿಯಾಗಳು, ಪಾಡ್ ಕಾಸ್ಟ್ ಗಳು ಯೂಟ್ಯೂಬ್ ಚಾನಲ್ ಗಳು, ಈ ಬದಲಾವಣೆಗಳ ಅಗ್ನಿಜ್ವಾಲೆಗಳು ವೇಗ ಪಡೆದುಕೊಳ್ಳಲು ಆಜ್ಯವನ್ನು ಸುರಿದವು.ಜನರನ್ನು ಒಂದು ಮಾಡೋದು, ಬೇರೆ ಮಾಡೋದೂ ಧರ್ಮ ಹಾಗೂ ಜಾತಿಯೇ. ಇದನ್ನೇ ಕಳೆದ ಅನೇಕ ವರ್ಷಗಳ ದಕ್ಷಿಣ ಕನ್ನಡದ ಘಟನಾವಳಿಗಳ ಮೂಲಕ ಸೂಚಿಸ ಹೊರಟ ಈ ಕಾದಂಬರಿಯು ದಕ್ಷಿಣ ಕನ್ನಡವನ್ನು ಉದಾಹರಣೆಯಾಗಿಟ್ಟುಕೊಂಡು ಹೇಳಿದ್ದರೂ ಅದು ಸದ್ಯ ನಮ್ಮ ಎಲ್ಲ ಜಿಲ್ಲೆ, ರಾಜ್ಯಗಳ ಸ್ಥಿತಿಯೂ ಹೌದು.ಈ  ಹೆಜ್ಜೆಗಳನ್ನು ನಿರುದ್ವೇಗದಿಂದ ನಿರೂಪಿಸುವ ಈ ಕಾದಂಬರಿಯು ಸದ್ಯದ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಕನ್ನಡಿಯು ಬೆಳಕು ನೀಡುವ ದೀಪವಾಗಲಿ; ಸುಡುವ ಬೆಂಕಿಯಾಗದಿರಲಿ ಎನ್ನುವ ಆಶಯವೂ ಕೃತಿಯ ಆಂತರ್ಯದಲ್ಲಿದೆ.

                                                                                                                                                                                                      - "ಸುಬ್ರಾಯ ಚೊಕ್ಕಾಡಿ"

'ವಿಶೇಷ ಎಂದರೆ ಇದಕ್ಕೆ ಎರಡು ಮುಖಪುಟವಿದೆ.ಲೇಖಕರೇ ಹೇಳುವಂತೆ ಇಂದಿನ ದಕ್ಷಿಣ ಕರ್ನಾಟಕದ ಕೋಮು ಸಂಘರ್ಷವನ್ನು ಅದು ವ್ಯಕ್ತಿಯ ವ್ಯಕ್ತಿತ್ವದಲ್ಲಿ ಉಂಟುಮಾಡುತ್ತಿರುವ ಬಿರುಕುಗಳನ್ನು, ಅದಕ್ಕೆ ಆಜ್ಯ ಸುರಿಯುತ್ತಿರುವ ಸೋಶಿಯಲ್ ಮೀಡಿಯಾಗಳನ್ನು ಕುರಿತು ಈ ಕಾದಂಬರಿ ಹೇಳುತ್ತದೆ. ಇದು ಆ ಮೂಲಕ ಒಂದು ರೀತಿಯಲ್ಲಿ ಭಾರತದ ಹಾಗೂ ಜಗತ್ತಿನ ಕಥನ ಕೂಡ ಹೌದು.ಮನುಷ್ಯನಿಗಿಂದು ಬೇಕಾಗಿರುವುದು ಬಿರುಕುಗಳನ್ನು ಉಂಟುಮಾಡುವ ಹಾದಿಯಲ್ಲ, ಒಗ್ಗೂಡಿಸಬೇಕಾದ, ಮನಸ್ಸಿನ ಮಾರ್ದವತೆಯನ್ನು, ಕೋಮಲತೆಯನ್ನು ಉಳಿಸಬೇಕಾದ ಹಾದಿ ಎಂಬುದನ್ನು ಅದರ ಮೇಲಿನ (ಹಾಫ್ ಜಾಕೆಟ್) ಮುಖಪುಟ ಹೇಳುತ್ತದೆ. ಕಾದಂಬರಿಯ ಕಥನದಲ್ಲಿ ಇವೆರಡೂ ನೇಯ್ಗೆಗಳಿವೆ.

                                                                                                                                                                                                                   "ಪ್ರಕಾಶಕರು"

ಜೋಗಿ

16 other products in the same category:

Product added to compare.