ಪ್ರಸಿದ್ಧ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು, ಚಿದಾನಂದ ಸಾಲಿ ಯವರು ಬರೆದಿರುವ ಈ ಕಥಾಸಂಕಲನವನ್ನು ಕುರಿತು ಹೀಗೆ ಹೇಳಿದ್ದಾರೆ. 

        ''ಈ ಕಥೆಗಳ ವಿಶಿಷ್ಟತೆ ಅವುಗಳ ಪ್ರಾದೇಶಿಕತೆಯಷ್ಟೇ ಅಲ್ಲದೆ ಅವು ಕೊಡಮಾಡುವ ಒಳನೋಟವೂ ಆಗಿದೆ. ಸಮುದಾಯದ ಮತ್ತು ವ್ಯಕ್ತಿಗಳ ಸಂಘರ್ಷವನ್ನು ಚಿತ್ರಿಸುತ್ತಲೇ, ಅಲ್ಲಿ ಸುಳಿಯುವ ಒಳತುಡಿತಗಳಿಗೂ ಇವು ಮಿಡಿಯುವುದರಿಂದ ಕಾಲದೇಶಾತೀತವಾಗಿ ನಿಲ್ಲುತ್ತವೆ. ಸಾಂದ್ರ ವಿವರಗಳ ಚಿತ್ರಕ  ಶೈಲಿ ಮತ್ತು ರಾಯಚೂರಿನ ಪ್ರಾದೇಶಿಕ ಭಾಷೆಯ ಸೊಗಡುಗಳಿಂದಾಗಿ, ಒಂದು ದಿಕ್ಕಿನಲ್ಲಿ ದೈನಂದಿಕದಲ್ಲೇ ಕಾಲೂರಿದಂತೆ ಕಂಡರೂ; ಮತ್ತೊಂದು ದಿಕ್ಕಿನಿಂದ ಅವೇ ದೈನಂದಿಕಗಳು ಬೇರೊಂದು ಲೋಕ ಗ್ರಹಿಕೆಯನ್ನು ಹೊಮ್ಮಿಸುತ್ತಿರುವುದು ಕಾಣಿಸುತ್ತದೆ''.

ಚಿದಾನಂದ ಸಾಲಿ

16 other products in the same category:

Product added to compare.