ಕಲಾಮ್ ಅವರು ತಮ್ಮ ನಡೆ-ನುಡಿ ಹಾಗೂ ಸರಳ ವ್ಯಕ್ತಿತ್ವದಿಂದ ಭಾರತ ಕಂಡ ಅಪರೂಪದ ರಾಷ್ಟ್ರಪತಿ ಎಂದು ಕರೆಸಿಕೊಂಡವರು. ಇವರು ಕೇವಲ ಒಬ್ಬ ವಿಜ್ಞಾನಿ ಮಾತ್ರವಲ್ಲ, ಒಬ್ಬ ಅತ್ಯುತ್ತಮ ಕೇಳುಗ ಮತ್ತು ಹೊಸ ಬಗೆಯ ಸಂವಹನಗಳ ಸಂಶೋಧಕ. ತಮ್ಮ ವೆಬ್  ಸೈಟ್  ಸಾವಿರಾರು ಜನ ಕಳಿಸುತ್ತಿದ್ದ ಪ್ರಶ್ನೆಗಳಿಗೆ ಪ್ರತಿದಿನವೂ ಖುದ್ದಾಗಿ ಉತ್ತರಿಸಿ ಜನತೆಯ ರಾಷ್ಟ್ರಪತಿ ಎನಿಸಿದವರು. ಆಧ್ಯಾತ್ಮಿಕ ಮೌಲ್ಯಗಳಿಗೆ ಇವರು ಕೊಡುತ್ತಿದ್ದ ಕ್ರಿಯಾಶೀಲ ಮತ್ತು ಹೊಸ ಬಗೆಯ ಒತ್ತು ಭಾರತದ ನಾಗರೀಕರ ಪಾಲಿಗೆ ನಿಜಕ್ಕೂ ಭರವಸೆಯ ಕಿರಣವಾಗಿದೆ. ತಮ್ಮ ಅಪಾರ ವೈಜ್ಞಾನಿಕ ಸಾಧನೆಯ ಹಿನ್ನೆಲೆಯಲ್ಲಿ ಮಾನವೀಯತೆಯನ್ನು ಎರಕ ಹೊಯ್ದಂಥ ಕಲಾಮ್ ರವರು ಭಾರತೀಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಕಲಾಮ್ ವ್ಯಕ್ತಿತ್ವ ಕುರಿತ ಚಿತ್ರಣಗಳಿಂದ ತುಂಬಿರುವ ನೆನಪುಗಳ ಮೋಹಕ ಮೆರವಣಿಗೆಯಂತಿದೆ ಈ ಕೃತಿ.

ವಿಶ್ವೇಶ್ವರ ಭಟ್

16 other products in the same category:

Product added to compare.