``80ರ ದಶಕದ ಮಲೆನಾಡಿನ ಹಳ್ಳಿಯ ಕೃಷಿಕ ಕುಟುಂಬವೊಂದರ ಬದುಕಿನ ಅನಾವರಣದೊಂದಿಗೆ ಆರಂಭವಾಗುವ ಕಾದಂಬರಿ `ಮನ್ವಂತರ'. ಮಲೆನಾಡಿನ ಜೀವನಶೈಲಿ, ಆಡುಮಾತು, ಕೃಷಿ ಚಟುವಟಿಕೆಗಳ ವಿಸ್ತೃತ ವಿವರಣೆ ಕಾದಂಬರಿಯಲ್ಲಿದೆ. ಅನಿವಾರ್ಯ ಪರಿಸ್ಥಿತಿಗೆ ಮಣಿದು ತ್ಯಾಗಮಯಿಯಾಗಲು ಸಮ್ಮತಿಸಿದ ಕಥಾನಾಯಕಿ ಆ ತ್ಯಾಗಕ್ಕೆ ತೆತ್ತ ಬೆಲೆ ಇದರ ಕಥಾವಸ್ತು. ಬೇಜವಾಬ್ದಾರಿ, ಸ್ವಾರ್ಥಿ ಗಂಡ, ಅಬೋಧ ಮಕ್ಕಳು, ಅತಂತ್ರ ಭವಿಷ್ಯ, ಬೆಲೆ ಇಲ್ಲದ ದುಡಿಮೆ, ಹೆಜ್ಜೆ ಹೆಜ್ಜೆಗೂ ನಲುಗುವ ಹೆಣ್ಣು, ದಾಳ ಮತ್ತೊಮ್ಮೆ ಉರುಳುವ ಸೂಚನೆ ಕಂಡಾಗ ತೆಗೆದುಕೊಂಡ ದಿಟ್ಟ ತೀರ್ಮಾನ, ಅದರ ಪರಿಣಾಮ, ಕಾಲದೊಡನೆ ಬದಲಾಗುವ ಮನೋಧರ್ಮ, ಹೆಣ್ಣಿನ ಸ್ಥಾನಮಾನಗಳಲ್ಲಿ ಉಂಟಾದ ಬದಲಾವಣೆ ಇತ್ಯಾದಿಗಳು `ಮನ್ವಂತರ'ದಲ್ಲಿವೆ''.

ವಸುಮತಿ ಉಡುಪ

16 other products in the same category:

Product added to compare.