"ಪ್ರೇಮಕ್ಕೆ ದಿವ್ಯಶಕ್ತಿಯನ್ನಿತ್ತು ಅದನ್ನು ಮಾನವ ಹೃದಯದಲ್ಲಿಟ್ಟ ಶಿವಲಿಂಗ ದೇವರ ಮಹಿಮೆಗೆ ಶರಣು ಹೇಳೋಣ. ಒಣ ನೆಲದಲ್ಲಿ ನೀರು ಚಿಮ್ಮೋದನ್ನು, ಉಸುಕಿನಲ್ಲಿ ಹಸಿರಾಡೋದನ್ನು, ಕಲ್ಲು ಕರಗುವುದನ್ನು ನಾವು ಪವಾಡ ಎನ್ನುತ್ತೇವೆ. ಜೀಕೆ ಮಾಸ್ತರರ ಹೃದಯದಲ್ಲಿ, ಅದು ಅಂಥ ವಯಸ್ಸಾದ ಹೃದಯದಲ್ಲಿ, ಪ್ರೇಮ ಪಲ್ಲವಿಸಿದ್ದನ್ನ, ಅದು ಹಾಹಾ ಅನ್ನುವುದರೊಳಗೆ ಹಬ್ಬಿ ಹೂ ಬಿಟ್ಟದ್ದನ್ನ ಪವಾಡವೇ ಎಂದು ನಾವು ಹೇಳಬಯಸುತ್ತೇವೆ" (ಕಾದಂಬರಿಯ ಆಯ್ದ ಸಾಲುಗಳು). ಕಂಬಾರರು ಬರೆದ ಕಿರು ಕಾದಂಬರಿ ಇದು. ಚಲನಚಿತ್ರವಾಗಿ ರಂಗಕೃತಿಯಾಗಿ ಸಾಕಷ್ಟು ಜನಪ್ರಿಯವಾದದ್ದು. ತನ್ನ ಆರೋಪಿತ ವ್ಯಕ್ತಿತ್ವವನ್ನು ಕಳಚಿ ಹಾಕಿ ಜೀವನಕ್ಕೆ ತಾನೇ ನೇರವಾಗಿ ಮುಖಾಮುಖಿಯಾಗಿ ತನ್ನ ನಿಜವನ್ನು ಶೋಧಿಸಿಕೊಳ್ಳುವುದು ಈ ಕಾದಂಬರಿಯ ಪ್ರಮುಖ ವಸ್ತುವಾಗಿದೆ.

ಚಂದ್ರಶೇಖರ ಕಂಬಾರ

16 other products in the same category:

Product added to compare.