ಇದು ಹಿಂದಿಯ ಧೀಮಂತ ಲೇಖಕ ಶ್ರೀ ಉದಯ ಪ್ರಕಾಶ್ ರ 'ವಾರೆನ್ ಹೇಸ್ಟಿಂಗ್ಸ್ ಕಾ ಸಾಂಡ್' ಎಂಬ ಕಿರು ಕಾದಂಬರಿಯ ಭಾವಾನುವಾದ. ಈ ಸಮಾಜೋ - ಆರ್ಥಿಕ ರಾಜಕೀಯ ಕಟಕಿಯಲ್ಲಿ ವಾರೆನ್ ಹೇಸ್ಟಿಂಗ್ಸ್ ಮತ್ತು ಅವನ ಹೋರಿ ರೂಪಕಗಳಾಗಿ ಬಳಸಲ್ಪಟ್ಟಿವೆ. 

ಉದಯ ಪ್ರಕಾಶರು ಒಂದು ವಿಲಕ್ಷಣ ಭ್ರಮೆ (Fantasy) ಯನ್ನು ಈ ಕಿರು ಕಾದಂಬರಿಯಲ್ಲಿ ಸೃಷ್ಟಿಸಿದ್ದಾರೆ. ಅದ್ಭುತಗಳ ನಾಡಾದ ಭಾರತವೆಂಬ ಕೂಟ ಪ್ರಶ್ನೆಯೊಂದಿಗೆ ವಾರೆನ್ ಹೇಸ್ಟಿಂಗ್ಸ್ ನ ಒಡನಾಟ ಹಾಸ್ಯಾಸ್ಪದವೂ ಅಸಮಂಜಸವೂ ಆಗಿದೆ. ತನ್ನ ಸುತ್ತಲಿನ ಎಲ್ಲದರೊಂದಿಗೆ ಅವನ ನಡವಳಿಕೆ ಸಂವೇದನಾರಹಿತವಾಗಿದೆ; ಇದರಲ್ಲಿ ಆಳ ತಿಳುವಳಿಕೆಯಾಗಲೀ , ಒಡನಾಡಿ ಅರಿವಾಗಲೀ ಇಲ್ಲ, ಹಾಗಾಗಿ ಸತ್ವವೂ ಇಲ್ಲ.

'ವಾರೆನ್ ಹೇಸ್ಟಿಂಗ್ಸ್ ನ ಹೋರಿ' ಇಂದು ನಮ್ಮ ಸುತ್ತ ನಡೆಯುತ್ತಿರುವ ಜಾಗತಿಕ ವಿದ್ಯಮಾನಗಳತ್ತ ನಮ್ಮನ್ನ ಕೊಂಡೊಯ್ಯುತ್ತದೆ. ಇಂದು ಭೋಗಲೋಲುಪತೆ ಮತ್ತು ಅಧಿಕಾರದಾಹ ವಿಕೃತಿಯ ರೂಪತಳೆದಿವೆ. ನಿರ್ಲಿಪ್ತತೆ- ಸಂವೇದನಾರಾಹಿತ್ಯಗಳ ನಡುವೆಯೂ ಕೆಲವು ಜೀವಿಗಳು, ಕೆಲವು ಚಳುವಳಿಗಳು ಹೋರಿಯ ಕೊಡು ಹಿಡಿದು ಮಣಿಸುವ, ಜಗತ್ತಿನ ಗಡ್ಡ ಹಿಡಿದು ಜಗ್ಗುವ ಧೈರ್ಯ ಹೊಂದಿವೆ. ವಿನಾಶದ ಅಂಚಿನಲ್ಲಿರುವ ತಳಿಯೊಂದಕ್ಕೆ ಕೊಟ್ಟ ಪ್ರಶಸ್ತಿಯಂತಿದೆ ಈ ಕಾದಂಬರಿ. ಡಾ. ಪ್ರಕಾಶ್ ಗರುಡರ ಭಾವಾನುವಾದ ಮೂಲದೊಂದಿಗೆ ಅನುಸಂಧಾನ ಮಾಡುತ್ತಲೇ ತಿಳಿಗನ್ನಡದಲ್ಲಿ ಚೊಕ್ಕವಾಗಿ ಹರಿದು ಬಂದಿದೆ. 

                                                                                   ಪ್ರೊ. ಎಚ್. ಆರ್. ಅಮರನಾಥ 

ಅನು: ಪ್ರಕಾಶ ಗರುಡ

16 other products in the same category:

Product added to compare.