ದುರಹಂಕಾರಿಯಾದ ದುಡುಕಿನ ಸಿಡುಕಿನ ಜೇಸನ್ ಸ್ಟೀವನ್ಸ್, ತನ್ನ ದೊಡ್ಡಪ್ಪ ರೆಡ್ ಸ್ಟೀವನ್ಸ್ ತನಗೆ ಕೊಡಲು ಉದ್ದೇಶಿಸಿದ ಕೊನೆಯ ಕೊಡುಗೆಯನ್ನು ಪಡೆಯಲು ಮಾಡಿದ ಒಂದು ವರ್ಷಾವಧಿಯ ದೃಢ ಪ್ರಯತ್ನದ ಕಥೆಯಿದು. ಸತತ ಸಾಧನೆಯ ಅಗ್ನಿದಿವ್ಯದಲ್ಲಿ ಮಿಂದು ಆತ ಪುಟವಿಟ್ಟ ಚಿನ್ನವಾದ, ಕಡೆದ ವಜ್ರವಾದ; ಮಾಗಿದ ರಸಭರಿತ ಫಲವಾದ ಎಂಬುದನ್ನು ಹೃದಯಂಗಮವಾಗಿ ಚಿತ್ರಿಸುವ ಕಾದಂಬರಿ ಇದು. ಜಿಮ್ ಸ್ಟೋವಾಲ್ ಅವರು ರಚಿಸಿರುವ ವಿಶಿಷ್ಟ ಕೃತಿ ಇದು. ದೃಷ್ಟಿ ಕಳೆದುಕೊಂಡಿರುವ ಲೇಖಕನೊಬ್ಬ ತನ್ನ ಓದುಗರಿಗೆ ಹೊಸ ದೃಷ್ಟಿ ಕೊಡಬಲ್ಲ ಇಂತಹ ಪುಸ್ತಕ ಬರೆದಿರುವುದು ಬಹಳ ಮೆಚ್ಚಬೇಕಾದ ಸಂಗತಿ. ಈ ಕೃತಿ ಇಂಗ್ಲಿಷಿನಲ್ಲಿ ಚಲನಚಿತ್ರವಾಗಿಯೂ ಹೊರಬಂದಿದೆ. ನರಸಿಂಹ ಭಟ್ಟರ ಸಮರ್ಥ ಅನುವಾದ ಕನ್ನಡದ್ದೇ ಕಾದಂಬರಿಯೆಂಬಂತೆ ಓದಿಸಿಕೊಳ್ಳುತ್ತದೆ.

ಅನು: ಎ. ನರಸಿಂಹ ಭಟ್ಟ

16 other products in the same category:

Product added to compare.