ವೈಜ್ಞಾನಿಕ ನಾಟಕಗಳು ರಂಗಭೂಮಿಗಿಂತ ರೇಡಿಯೋ ಮಾಧ್ಯಮಕ್ಕೇ ಹೆಚ್ಚು ಹೊಂದಿಕೊಳ್ಳುತ್ತವೆ. ಎಚ್.ಜಿ. ವೆಲ್ಸ್ನ ವೈಜ್ಞಾನಿಕ ಕೃತಿಗಳು ರೇಡಿಯೋ ನಾಟಕಗಳಾಗಿ ಅಪಾರ ಪ್ರಭಾವ ಬೀರಿದ್ದನ್ನು ಅಂದಿನ ಶ್ರೋತೃಗಳು ಇಂದಿಗೂ ಮರೆತಿಲ್ಲ. ಕನ್ನಡದಲ್ಲಿಯೂ ವೈಜ್ಞಾನಿಕ ರೇಡಿಯೋ ನಾಟಕಗಳ ಒಂದು ಪರಂಪರೆಯೇ ಬೆಳೆದು ಬಂದಿದೆ. ಕನ್ನಡ ಶ್ರೋತೃಗಳು ಅಷ್ಟೇ ಅಕ್ಕರೆಯಿಂದ ಈ ಪ್ರಕಾರವನ್ನು ಸ್ವಾಗತಿಸಿದ್ದಾರೆ. ಕಂಬತ್ತಳ್ಳಿಯವರ ಈ ನಾಟಕಗಳು ಈ ಬಗೆಯವು. ಇವು ಕೇವಲ ರೇಡಿಯೋ ನಾಟಕಗಳಾಗಿಲ್ಲ. ಓದು ನಾಟಕಗಳಾಗಿಯೂ ಗಮನ ಸೆಳೆಯುತ್ತವೆ. ನಾಲ್ಕು ಪ್ರಸಿದ್ಧ ವೈಜ್ಞಾನಿಕ ಕಥೆಗಳನ್ನು ರೇಡಿಯೋಗೆ ರೂಪಾಂತರಗೊಳಿಸಿದ ಯಶಸ್ವಿಯಾಗಿ ಪ್ರಸಾರಗೊಂಡ ನಾಟಕಗಳಿವು.

ಪ್ರಕಾಶ್ ಕಂಬತ್ತಳ್ಳಿ

16 other products in the same category:

Product added to compare.