ವ್ಯಾಸರ ಕಥೆಗಳನ್ನು ಕುರಿತು.......

     "ವಿಕ್ಷಿಪ್ತ ಕತೆಗಾರ ಎಂದೇ ಗುರುತಿಸಿಗೊಂಡಿದ್ದ ಕಾಸರಗೋಡಿನ ಎಂ.ವ್ಯಾಸರ ಕತೆಗಳು ಸಾಹಿತ್ಯ ವಲಯದಲ್ಲಿ ತನ್ನದೇ ಆದ ವಿಶೇಷ ಗುಣಗಳಿಂದ ವಿಶಿಷ್ಟವಾದ ಸ್ಥಾನವನ್ನು ಪಡೆದಿವೆ.ಅವರ ಕತೆಗಳು ನಮ್ಮಲ್ಲಿ ಹೆಚ್ಚು ಚರ್ಚಿತವಾಗಿಲ್ಲ ಎನ್ನುವುದು ನಿಜ, ಆದರೆ ಒಂದು ದೊಡ್ಡ ಓದುಗ ವಲಯವನ್ನು ಅದು ತಟ್ಟುತ್ತಿತ್ತು.ಅವುಗಳಿಗೆ ಓದುಗರ ಭಾವಪ್ರಪಂಚದಲ್ಲಿ ಒಂದು ಸ್ಪಂದನವನ್ನುಂಟುಮಾಡುವ  ಗುಣವಿತ್ತು. ಪ್ರಸಿದ್ಧಿ, ಪ್ರಶಸ್ತಿಗಳಿಂದ ದೂರ ಉಳಿದ ವ್ಯಾಸರು ಓದುಗರ ಹೃದಯಕ್ಕೆ ಹೆಚ್ಚು ಹತ್ತಿರವಾಗಿದ್ದರು.

      ಸಾವಿನ ಬಗ್ಗೆ , ಸಾವಿನ ಭಯದ ಹಿಂದಿನ ಮನುಷ್ಯ ಮನಸ್ಸಿನ ಬಗ್ಗೆ ಗಾಢವಾಗಿ ಚಿಂತಿಸಿದ್ದ ವ್ಯಾಸರು,'ಸಾವು ಬದುಕಿನ ಕೊನೆಯಲ್ಲ; ಅದು ಕೇವಲ ಬದುಕಿನ ರೂಪಾಂತರ' ಎನ್ನುತ್ತಿದ್ದರು.ಸಾವು ಮತ್ತು ಕಾಮವನ್ನು ಕೇಂದ್ರವಾಗಿಟ್ಟು ಅವರು ಯೋಚಿಸಿ ನೇಯ್ದ ಮನೋವಿನ್ಯಾಸಗಳು ಅವರ ಕತೆಗಳಲ್ಲಿ ಹಾಗೇ ಇವೆ. ಅವು ಎಲ್ಲ ಕಾಲದ ಮನುಷ್ಯನ ಆಲೋಚನೆಗಳಿಗೂ ಸಲ್ಲುವಂತದ್ದರಿಂದ ಅವರ ಕತೆಗಳಿಗಾಗಲೀ ಚಿಂತನೆಗಳಿಗಾಗಲೀ ಸಾವಿನ ಭಯವಿಲ್ಲ". 

ಎಂ. ವ್ಯಾಸ

16 other products in the same category:

Product added to compare.