"ತೂಗುಮಂಚದಲ್ಲಿ ಕೂತು" ತರುಣ ಬರಹಗಾರ ಶ್ರೀನಿಧಿಯವರ ಸುಲಲಿತ ಪ್ರಬಂಧಗಳು. ನೆನಪು, ಕಲ್ಪನೆ, ಬಯಕೆ ಮತ್ತು ಸಂತೃಪ್ತಿ ಬೆರೆತಂಥ ಸ್ಥಿತಿಯೊಂದನ್ನು ಡಿ.ಎಸ್. ಶ್ರೀನಿಧಿ ಇಲ್ಲಿಯ ಬರಹಗಳಲ್ಲಿ ಆವಾಹನೆ ಮಾಡಿಕೊಂಡಿದ್ದಾರೆ. ಈ ಬರಹಗಳ ತನ್ಮಯತೆಯೇ ಇವುಗಳ ಶಕ್ತಿ. ಶ್ರೀನಿಧಿಯೊಳಗೆ ಉಕ್ಕುವ ಹುಮ್ಮಸ್ಸಿದೆ. ಅವರು ದನಿಯಲ್ಲಿ ಉತ್ಸಾಹ ತುಳುಕಿಸುತ್ತಾ ಕಣ್ಣರಳಿಸುತ್ತಾ ಎತ್ತರದ ದನಿಯಲ್ಲಿ ತಮ್ಮ ಸಂತೋಷವನ್ನು ಹಂಚಿಕೊಳ್ಳುವ ಶೈಲಿಯಲ್ಲೇ ಇಲ್ಲಿಯ ಪ್ರಬಂಧಗಳೂ ಇವೆ. ನಮ್ಮ ಈ ಕ್ಷಣದ ಲೋಕವನ್ನು ತಲ್ಲಣಗೊಳಿಸುವ ಸಂಗತಿಗಳಿಂದ ನಮ್ಮನ್ನು ಕೆಲವು ಕ್ಷಣಗಳ ಮಟ್ಟಿಗೆ ಮುಕ್ತಗೊಳಿಸುವ ಈ ಪ್ರಬಂಧಗಳಿಗಾಗಿ ನಾನು ಶ್ರೀನಿಧಿಗೆ ಧನ್ಯವಾದ ಹೇಳಬೇಕು.-ಜೋಗಿ

ಶ್ರೀನಿಧಿ ಡಿ.ಎಸ್.

16 other products in the same category:

Product added to compare.