`ಗಾಡ್ ಫಾದರ್' - ಅಮೆರಿಕನ್ ಶೈಲಿಯ ಒಂದು ವಿಶಿಷ್ಟ ಕಾದಂಬರಿ. ವಿಶ್ವದಲ್ಲಿ ಈ ಕಾದಂಬರಿಗೆ ದೊರೆತಿರುವ ಪ್ರಚಾರ ಮತ್ತು ಜನಮನ್ನಣೆ ಅತ್ಯದ್ಭುತ. ಜನಮನವನ್ನು ಗೆಲ್ಲುವ ವಿಶೇಷ ಕಥಾನಕ, ಗಡುಸಲ್ಲದ ಶೈಲಿ, ನಯವಾದ ನಿರೂಪಣೆ, ದ್ವೇಷ, ಅಸೂಯೆ, ವೈಷಮ್ಯ, ವರ್ಗ ಸಂಘರ್ಷ, ಅಪೂರ್ವ ಕಲ್ಪನೆ, ಅಸಾಧ್ಯವನ್ನು ಸಾಧಿಸಿ ತೋರಿಸುವ ಛಲ, ಕುತಂತ್ರ-ಷಡ್ಯಂತ್ರಗಳಿಂದ ಕೂಡಿದ ರೋಚಕ ಸಾಹಸ, ಮೈನವಿರೇಳಿಸುವ ಘಟನೆಗಳು, ಕ್ಷಣ ಕ್ಷಣಕ್ಕೂ ಬದಲಾಗುವ ಸನ್ನಿವೇಶಗಳು, ತೀವ್ರಗತಿಯ ಕಥಾ ತಿರುವು, ಮಾನವನ ಲೋಪದೋಷಗಳನ್ನು, ಬೂಟಾಟಿಕೆ, ಅಧಿಕಾರಲಾಲಸೆಗಳನ್ನು ಕುರಿತಾದ ವಿಡಂಬನೆ - ಈ ಎಲ್ಲವೂ ಅಮೆರಿಕದ ಶ್ರೇಷ್ಠ ಕಾದಂಬರಿಕಾರ ಮಾರಿಯೋ ಪೂಜೊ ಅವರ `ಗಾಡ್ ಫಾದರ್' ಕಾದಂಬರಿಯ ಸ್ಪೆಷಾಲಿಟಿ. ಇವರ ಕಥಾತಂತ್ರ ಓದುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಕಾದಂಬರಿಯ ಪಾತ್ರಗಳ ನೋವು, ಹಂಬಲ, ಪ್ರೀತಿ ಓದುಗರ ಮನಮಿಡಿಯುತ್ತವೆ. ಕಾದಂಬರಿಕಾರರ ಪ್ರತಿಭೆ, ಕಲ್ಪನಾವಿಲಾಸಗಳು ಇಲ್ಲಿ ಸ್ಫುಟವಾಗಿ ಹೊರಹೊಮ್ಮಿವೆ'' ಎಂದಿದ್ದಾರೆ ಅನುವಾದಕ ಎಂ.ವಿ. ನಾಗರಾಜರಾವ್ ``ಜಗತ್ತಿಗೆ ಡಾನ್ ಎಂಬ ಪದವನ್ನು ಕೊಟ್ಟದ್ದು, ಭೂಗತ ಜಗತ್ತನ್ನು ಪರಿಚಯಿಸಿದ್ದು. ತಣ್ಣನೆಯ ಕ್ರೌರ್ಯವೊಂದನ್ನು ಕಟ್ಟಿಕೊಟ್ಟದ್ದು, ಕೊಲೆಗಾರ ಕೂಡ ಬುದ್ಧಿಜೀವಿ ಎಂಬಂತೆ ತೋರಿಸಿಕೊಟ್ಟದ್ದು, ಕ್ರೌರ್ಯಕ್ಕೊಂದು ವಿಷಾದದ ಸ್ಪರ್ಶ ಕೊಟ್ಟದ್ದು ಮಾರಿಯೋ ಪೂಜೋ. ಆತ ಬರೆದ ಗಾಡ್ಫಾದರ್ ಅಂಡರ್ ವಲ್ರ್ಡ್ಗೆ ಸಂಬಂಧಿಸಿದ ಎಲ್ಲಾ ಕತೆ, ಕಾದಂಬರಿ, ಸಿನಿಮಾಗಳಿಗೆ ಸ್ಫೂರ್ತಿ".

ಅನು: ಎಂ.ವಿ. ನಾಗರಾಜರಾವ್

16 other products in the same category:

Product added to compare.