ಎಲ್ಲಿಯವರೆಗೆ ಜಾನಪದ ಸಂಸ್ಕೃತಿಗೆ ಕಲೆಯು ಅಗತ್ಯವಿದೆಯೋ, ಎಲ್ಲಿಯವರೆಗೆ ಅದು ಜಾನಪದದ ಸಂಸ್ಕೃತಿಯಾಗಿರುತ್ತದೆಯೋ  ಅಲ್ಲಿಯವರೆಗೆ ಕಲೆಯು ಮುಂದುವರೆಯುತ್ತದೆ.

ಮುಂಗೋಳಿ ಕೂಗ್ಯಾವು ಮೂಡಣ ಬೆಳಗಿ | 

ತಂಗಾಳಿ ಬೀಸ್ಯಾವು ತವರೀ ಹೂವರಳಿ ||

ಹೂಹೂವಿನೊಳಗೊಂದು ಕೈಲಾಸವರಳ್ಯಾವು  | 

ಕೈಲಾಸ ಹಾಡ್ಯಾವು ಏನಂತ ತಾಯೇ | 

ಸಾವಿರದ ಶರಣವ್ವ ಕನ್ನಡದ ತಾಯೇ ||

ಅನೇಕ ವರ್ಷಗಳ ಹಿಂದೊಮ್ಮೆ ತೋಂಡಿಯಾಗಿದ್ದ ಈ ಕತೆಗಳನ್ನು ನಾಟಕವಾಗಿಸಿ ದೂರದರ್ಶನದಲ್ಲಿ, ಸುಮಾರು ಹದಿನೈದುವಾರ ತೋರಿಸಲಾಗಿತ್ತು. ಆಗ ಸನ್ಮಾನ್ಯ ಶಿವರುದ್ರಪ್ಪನವರು, ಅನಂತಮೂರ್ತಿ ಅವರಂಥ ಹಿರಿಯರು ನಿರೂಪಕರಾಗಿದ್ದರು. ಅವುಗಳನ್ನೇ ನಾಟಕ ರೂಪದಲ್ಲಿ "ಅಮೋಘವರ್ಷ ನೃಪತುಂಗ  ಮತ್ತು ಇತರ ಮಕ್ಕಳ ನಾಟಕಗಳು" ಎಂಬ ಹೆಸರಿನಲ್ಲಿ ನಿಮ್ಮ ಕೈಗಿಡುತ್ತಿದ್ದೇನೆ.

ಚಂದ್ರಶೇಖರ ಕಂಬಾರ

16 other products in the same category:

Product added to compare.