ವಲಸೆಯೆನ್ನುವುದು ಇಂದು ಜಗತ್ತಿನಾದ್ಯಂತ ಮನುಷ್ಯರನ್ನು ಕಾಡುವ ಮುಖ್ಯವಾದ ಅನುಭವವಾಗಿದೆ. ಹಳ್ಳಿಗಳಿಂದ ನಗರಕ್ಕೆ, ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ಪ್ರತಿನಿತ್ಯ ಲಕ್ಷಾಂತರ ಜನ ಬಗೆಬಗೆಯ ಕಾರಣಗಳಿಗಾಗಿ ವಲಸೆ ಹೋಗುತ್ತಿದ್ದಾರೆ. ಒಂದೆಡೆಯಿಂದ ಕಿತ್ತು ಇನ್ನೊಂದೆಡೆ ಊರಿಕೊಳ್ಳುವ ಈ ಪ್ರಕ್ರಿಯೆ ಲೋಕದೆಲ್ಲೆಡೆ ಸಂಕಟವನ್ನೂ ಸಂಘರ್ಷವನ್ನೂ ಹುಟ್ಟುಹಾಕಿದೆ. ಜಗತ್ತಿನ ಹಲವಾರು ಮುಖ್ಯ ಲೇಖಕರನ್ನು ಕೆಣಕಿದ, ಅತ್ಯಂತ ಪ್ರಸ್ತುತವಾದ ಈ ವಸ್ತುವನ್ನೆತ್ತಿಕೊಂಡು ಅದನ್ನು ಹಲವು ಕೋನಗಳಿಂದ ಶೋಧಿಸುವ ಮಹತ್ವದ ಕಾದಂಬರಿ `ಹಿಜಾಬ್'.-ವಿವೇಕ ಶಾನಭಾಗ

ಗುರುಪ್ರಸಾದ ಕಾಗಿನೆಲೆ

16 other products in the same category:

Product added to compare.