ಈ ಕಾದಂಬರಿ ರಚಿಸಿ ಆರು ದಶಕಗಳು ಗತಿಸಿದರೂ ಇಂದಿಗೂ ಎಲ್ಲ ವಯಸ್ಸಿನವರಿಗೆ ಮೋಡಿ ಮಾಡುತ್ತದೆ. ಕಾರಣವೇನೆಂದರೆ ಲೇಖಕನು ಕಾದಂಬರಿಯ ಆರಂಭದಲ್ಲೇ 'ಯಾವುದಕ್ಕೆ ಆದಿಯಿಲ್ಲವೋ-ಅಂತ್ಯವಿಲ್ಲವೋ ಇದು ಅಂಥ ದೇವರ ಕಥೆಯಾಗಿದೆ' ಎನ್ನುತ್ತಾನೆ. ಸತ್ಯವೆಂದರೆ ದೇವರ ರೂಪವಾಗಿರುವ ಮನೆಯಲ್ಲಿಯ ಮುನ್ನೂರು ವರ್ಷಗಳ ನರಸಿಂಹನು ಈ ಕಥೆಯ ಕೇವಲ ನಿಮಿತ್ತವಾಗಿದ್ದಾನೆ. ಆದರೆ ಈ ನರಸಿಂಹನ ಸಾಕಾರ ಮೂರ್ತಿಯ ಸುತ್ತಲೂ ಆಕಾರ ಪಡೆದ 'ಪಳಸಗಾಂವ' ಈ ಚಿಕ್ಕ ಊರಿನ ಒಂದು ದೊಡ್ಡ ಕುಟುಂಬದ ಭಾವ ಭಾವನೆಯ, ಒತ್ತಡ ತಲ್ಲಣಗಳ, ಆಕಾಂಕ್ಷೆ-ಉಪೇಕ್ಷೆಗಳ ಅನನ್ಯ ಚಿತ್ರಣವನ್ನು ಈ ಕಾದಂಬರಿಯ ಮೂಲಕ ಮೊಕಾಶಿಯವರು ಓದುಗರ ಮುಂದೆ ತಂದು ನಿಲ್ಲಿಸುತ್ತಾರೆ.

ಅರವತ್ತರ ದಶಕದಲ್ಲಿ ನಗರೀಕರಣ ಆರಂಭಗೊಂಡು ಉದರ ನಿರ್ವಹಣೆಗಾಗಿ -ಉದ್ಯೋಗ ವ್ಯವಸಾಯಕ್ಕಾಗಿ ಪಳಸಗಾಂವದಂಥ ಹಲವು ಪ್ರಾತಿನಿಧಿಕ ಊರು, ಅಲ್ಲಿಯ ಹಲವು ಪೀಳಿಗೆ ಕೂಡಿ ಬಾಳುವ ಅವಿಭಕ್ತ ಕುಟುಂಬವನ್ನು ಅಪ್ಪುಗೆಯಲ್ಲಿ ಹಿಡಿವ 'ನರಹರಿ-ನರಸಿಂಹ' ಕೇವಲ ಒಂದು ಕುಟುಂಬದವನಾಗಿರದೆ, ಸಂಪೂರ್ಣ ಗ್ರಾಮ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿದ್ದಾನೆ. ಇಂಥ ಕುಟುಂಬದವರ ಅನಿವಾರ್ಯ ಚೆದುರುವಿಕೆ, ಅವರವರ ಶಕ್ತಿ ಸಾಮರ್ಥಕ್ಕನುಗುಣವಾಗಿ ಆದ ಉತ್ಕರ್ಷ ಅಪಕರ್ಷ, ಈ ಏರಿಳಿತದಲ್ಲಿ ಗ್ರಾಮದ ಮನೆ- ಕುಟುಂಬವು ದಿಕ್ಕಾಪಾಲಾಗುವಾಗ' ನರಹರಿಯು ಯಾರೊಂದಿಗೆ ಹೋಗಬೇಕು, ಅಂದರೆ ಈ 'ಕುಲಾಚಾರ'ವನ್ನು ಮುಂದುವರಿಸಿಕೊಂಡು ಹೋಗುವವರು ಯಾರು-ಎನ್ನುವದೇ ಈ ಕಾದಂಬರಿಯ ಆಶಯದ್ರವ್ಯ.

'ದೇವರು ಮನುಷ್ಯ ಸಂಬಂಧ ವಿಚಿತ್ರವಾದುದು...ಹಲವು ಕಾರಣಗಳಿಂದ ಮನುಷ್ಯನಿಗೆ ದೇವರ ಅಗತ್ಯವಿದೆ... ಆದರೆ ದೇವರಿಗೆ ಮನುಷ್ಯನ ಅಗತ್ಯವಿದೆಯೇ- ಎನ್ನುವದು ಹೇಳಲು ಬರುವುದಿಲ್ಲ' -ಎಂಬ ಮನುಷ್ಯರ ಮತ್ತು ದೇವರ ಕಥೆಯಿದು!

                                                                                                                                                                                                    ಡಾ. ಅಜಿತ ಕಾನಿಟಕರ

ಅನು:ಚಂದ್ರಕಾಂತ ಪೋಕಳೆ

16 other products in the same category:

Product added to compare.