ಪಾಶ್ಚಾತ್ಯ ಮಹಾಕಾವ್ಯಗಳಲ್ಲಿ ಒಂದೆಂದು ಪ್ರಸಿದ್ಧವಾದುದು ಮಿಲ್ಟನ್ನ "ಪ್ಯಾರಡೈಸ್ ಲಾಸ್ಟ್". ಇಂಗ್ಲಿಷ್ ಸಾಹಿತ್ಯದ ಇತಿಹಾಸದಲ್ಲಿ ಇಂತಹ ಭವ್ಯಕಾವ್ಯ ಮತ್ತೊಂದಿಲ್ಲವೆಂಬ ಖ್ಯಾತಿಗೆ ಪಾತ್ರವಾದುದು. ಈ ಮಹಾಕಾವ್ಯವು ಕ್ರೈಸ್ತ ಮತವು ಹೇಳುವಂತೆ ಮನುಷ್ಯನ ಪತನವನ್ನು ಕುರಿತದ್ದು. ಈ ಕಾವ್ಯ ರಚನೆ ಉದ್ದೇಶ ಕವಿಯೇ ಹೇಳಿಕೊಂಡಿರುವಂತೆ ಪರಮಾತ್ಮನ ರೀತಿನೀತಿಗಳ ನ್ಯಾಯಪರತೆಯನ್ನು ಸಮರ್ಥಿಸಿ ಮನುಷ್ಯರಿಗೆ ತಿಳಿಯಪಡಿಸುವುದೇ ಆಗಿದೆ. ಈಗಾಗಲೇ ಪಾಶ್ಚಾತ್ಯ ಮಹಾಕಾವ್ಯಗಳನ್ನು ಕನ್ನಡಿಗರಿಗೆ ಕೊಡುತ್ತಾ ಬಂದಿರುವ ಪ್ರೊ. ಕೆ.ಎಂ. ಸೀತಾರಾಮಯ್ಯ "ಪ್ಯಾರಡೈಸ್ ಲಾಸ್ಟ್" ಕಾವ್ಯವನ್ನು ಸಮರ್ಥವಾಗಿ ಗದ್ಯ ರೂಪದಲ್ಲಿ ಅನುವಾದಿಸಿಕೊಟ್ಟಿದ್ದಾರೆ.

ಅನು:ಕೆ.ಎಂ. ಸೀತಾರಾಮಯ್ಯ

16 other products in the same category:

Product added to compare.