ನನ್ನ ಮಟ್ಟಿಗೆ.ಎಚ್ಚೆಸ್ವಿ ನಮ್ಮ ತಲೆಮಾರಿನ ಸರ್ವ ಶ್ರೇಷ್ಠ ಕವಿ. ಪ್ರಖರ ಪ್ರತಿಭೆಯ ಜೊತೆಗೆ ನಿರಂತರ ಅಧ್ಯಯನ, ಪರಿಶ್ರಮ ಮತ್ತು ಸಂಕಲ್ಪ ಬಲ ಅವರನ್ನು ಈ ಎತ್ತರಕ್ಕೆ ಕೊಂಡೊಯ್ದಿವೆ. ಕನ್ನಡ ಕಾವ್ಯ ಪರಂಪರೆಯಲ್ಲಿ ಆಳವಾಗಿ ಬೇರೂರಿ, ಅದರ ಸತ್ವವನ್ನು ಹೀರಿ, ಸಮಕಾಲೀನ ಜಗತ್ತಿನಲ್ಲಿ ತನ್ನ ರೆಂಬೆ ಕೊಂಬೆಗಳನ್ನು ಎತ್ತರೆತ್ತರಕ್ಕೆ ಚಾಚಿ ಬೆಳೆದ ವಿಸ್ತಾರ ವಟವೃಕ್ಷ ಅವರ ಕಾವ್ಯ.ಎಚ್ಚೆಸ್ವಿ ಯವರ ವೈಯಕ್ತಿಕ ಜೀವನದ ಹಲವಾರು ಸಂಗತಿಗಳು ಅವರ 'ಅನಾತ್ಮಕಥನ'ದಲ್ಲಿ ಈಗಾಗಲೇ ಮನೋಜ್ಞವಾಗಿ ನಿರೂಪಣೆಗೊಂಡಿವೆ. ಇದೀಗ ಹೊರಬರುತ್ತಿರುವ 'ನೆನಪಿನ ಒರತೆ'ಯಲ್ಲಿ ಅವರು ತಮ್ಮ ಸಾಹಿತ್ಯಿಕ ಜೀವನದ ಸ್ಮರಣೀಯ ಮೈಲುಗಲ್ಲುಗಳನ್ನು ಅತ್ಯಂತ ವಿನಯ ಮತ್ತು ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ.ತಾವು ಎದುರಿಸಿದ ಪ್ರತಿರೋಧಗಳನ್ನು,ಸಾಹಿತ್ಯಿಕ ವಾಗ್ವಾದಗಳನ್ನು ಸಮಚಿತ್ತದಿಂದ ನಿಭಾಯಿಸಿದ ಅವರ ರೀತಿ ಇಂದಿನ ಮತ್ತು ಮುಂದಿನ ಎಲ್ಲ ಸಾಹಿತಿಗಳಿಗೂ ಮಾದರಿಯಾಗಬಲ್ಲವು. ಕವಿಯಾಗಿ ಮಾತ್ರವಲ್ಲದೆ. ಸೈಂಟ್‌ ಜೋಸೆಫ್ ಕಾಮರ್ಸ್ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ, ಅಲ್ಲಿನ 'ಕನ್ನಡ ಸಂಘ'ದ  ಸಂಸ್ಥಾಪಕರಾಗಿ, ಪುತಿನ ಟ್ರಸ್ಟಿನ ಅಧ್ಯಕ್ಷರಾಗಿ, 'ಅಭ್ಯಾಸ'ಎಂಬ ಹಳೆಗನ್ನಡ ಸಾಹಿತ್ಯದ ಉಪನ್ಯಾಸ ಮಾಲಿಕೆಯ ನಿರ್ದೇಶಕರಾಗಿ ಅವರು ಸಲ್ಲಿಸಿದ ಸಾರಥಿಕ ಸೇವೆಯ ಮಾಹಿತಿಯೂ ಇಲ್ಲಿದೆ. ಹೀಗೆ, ಕಳೆದ ಐದಾರು ದಶಕಗಳ ಪರೋಕ್ಷ ಕನ್ನಡ ಸಾಹಿತ್ಯ ಚರಿತ್ರೆಯಾಗಿ ಈ ಕೃತಿಗೆ ತಾನಾಗಿ ಒಂದು ಮಹತ್ವದ ಸ್ಥಾನ ಪ್ರಾಪ್ತವಾಗಿದೆ.

                                                                                                                                                                                                ಬಿ.ಆರ್. ಲಕ್ಷ್ಮಣ್ ರಾವ್

    

ನಿರೂಪಣೆ : ಅಂಜನಾ ಹೆಗಡೆ

16 other products in the same category:

Product added to compare.