• New product

ಬಿ.ಆ‌ರ್. ಲಕ್ಷ್ಮಣರಾಯರ ಕವಿತೆಗಳು ಬರಿಯ ಪದ್ಯಗಳಲ್ಲ; ಕವಿಯ ರೂಪಕ ಚಿತ್ರಶಾಲೆಯಂತೆ ಅವು ನಮ್ಮೊಳಗೆ ಇಳಿಯುತ್ತವೆ. ಪ್ರೀತಿ, ನೋವು, ಸಾಂಗತ್ಯ, ವಿರಹ, ಗೆಲುವು, ಸೋಲು, ಸಾವಿನ ಕುರಿತೂ ಒಂದು ಸಣ್ಣ ನಗೆಯೊಂದಿಗೆ ಮಾತನಾಡುವ ಅವರ ಕವಿತೆಗಳಲ್ಲಿ ಕವಿಗಿಂತ ಹೆಚ್ಚಾಗಿ ಒಬ್ಬ ಸಹಜ ಜೀವೋಲ್ಲಾಸದ ಸ್ನೇಹಿತ ಕಾಣಿಸುತ್ತಾನೆ. ತನ್ನದೇ ರೀತಿಯಲ್ಲಿ ಬದುಕಿದ ಅನುಭವವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಓದುಗರ ಮುಂದೆ ಇಡುವ ಈ ಕವಿತೆಗಳು, ಕೊನೆಗೆ ಓದುಗರದೇ ಅನುಭವಗಳಾಗಿ ಮಾರ್ಪಡುತ್ತವೆ. ಕೆಲವು ಸಾಲುಗಳ ಬಳಿ ನಾವು ನಿಂತು, "ಇದು ನನ್ನ ಮಾತೂ ಹೌದಲ್ಲ!" ಎಂದುಕೊಳ್ಳುತ್ತೇವೆ. 

ತನ್ನನ್ನು ಪೂರ್ತಿಯಾಗಿ ಕವಿತೆಗೆ ಒಪ್ಪಿಸಿಕೊಂಡವರು ಬಿ.ಆರ್.ಲಕ್ಷ್ಮಣರಾವ್. ಆಗೊಮ್ಮೆ ಈಗೊಮ್ಮೆ ಅವರು ಕಾವ್ಯ ಪಾತಿವ್ರತ್ಯದ ಹೊಸಿಲು ದಾಟಿದ್ದಾರೆ ನಿಜ. ಆದರೆ ಅವರ ಇತರ ಬರಹಗಳೂ ಕಾವ್ಯದ ಸುತ್ತಲೇ ಸುಳಿಯುತ್ತವೆ. ಲಯ ಮತ್ತು ಅರ್ಥ ಒಂದಾಗಿರುವ ಅರ್ಧನಾರೀಶ್ವರ ಪ್ರತಿಮೆಯಂತೆ ಅವರ ಕವಿತೆಗಳು ನಮ್ಮನ್ನು ಎದುರುಗೊಳ್ಳುತ್ತವೆ. ಮುದಗೊಳಿಸುತ್ತವೆ. ಹೀಗಾಗಿಯೇ ಅವರ ಪದ್ಯಗಳನ್ನು ಓದಿದವರಿಗೆ ಬಿಆರೆಲ್ ಕವಿತೆಗಳ ಹಕ್ಕುಸ್ವಾಮ್ಯ ಕವಿಯದು; ಭಾವಸ್ವಾಮ್ಯ ಮಾತ್ರ ತಮ್ಮದು ಅಂತ ಅನ್ನಿಸುತ್ತದೆ.

                                                                                                                                            -ಜೋಗಿ 

ಬಿ.ರ್ ಲಕ್ಷ್ಮಣರಾವ್

16 other products in the same category:

Product added to compare.