``ನಮ್ಮ ಇಂದಿನ ಯಾಂತ್ರಿಕ ಜೀವನದಲ್ಲಿ, ನಾಗರಿಕತೆಯ ಹೆಸರಿನಲ್ಲಿ, ವಿಜ್ಞಾನದ ಬೆಳಕಿನಲ್ಲಿ ತರ್ಕಕ್ಕೆ ಸಿಗದ ಘಟನೆಗಳ ಅತೀಂದ್ರಿಯ ಲೋಕವೊಂದು ಈ ಕೃತಿಯಲ್ಲಿದೆ. ಮನುಷ್ಯನ ಎಲ್ಲೆಯಿರದ ಮನಃಶಕ್ತಿಯನ್ನು ಮನವರಿಕೆ ಮಾಡಿಕೊಡುವ ಇಂದಿರಾತನಯರ ಕೃತಿಗಳು ಒಂದು ಅರ್ಥದಲ್ಲಿ ಕಾದಂಬರಿ, ನಿಜ. ಆದರೆ ವ್ಯಾಪಕ ಅರ್ಥದಲ್ಲಿ ಸಂಕಲಕ್ಪಶಕ್ತಿಯಿಂದ ಪ್ರೇರಿತವಾದ ಮಾನವಮನಸ್ಸಿನ ಸೂಕ್ಷ್ಮಗಳನ್ನು ಆಧಾರಗಳ ಮೂಲಕ ನಿರೂಪಿಸುವ ಅಪೂರ್ವ ಗ್ರಂಥಗಳು. ಕನ್ನಡದಲ್ಲಿ ಈ ಬಗೆಯ ಕಾದಂಬರಿಗಳನ್ನು ಮೊಟ್ಟಮೊದಲಿಗೆ ಬರೆದವರು ಇಂದಿರಾತನಯ. ಅತ್ಯಂತ ಕ್ಲಿಷ್ಟವಾದ ಮಂತ್ರತಂತ್ರ ವಿದ್ಯೆಗಳನ್ನು ಸಮಾಜ ಜೀವನದ ಗಾಜಿನ ಮೂಲಕ ಹಾಯಿಸಿ, ಒಂದು ಗಾಢ ಅನುಭವ ಉಂಟಾಗುವಂತೆ ಮಾಡುವ ಅವರ ಬರವಣಿಗೆ ನಮ್ಮ ಸಾಹಿತ್ಯ ಸಂದರ್ಭದಲ್ಲಿ ತೀರ ಅಪರೂಪವಾದದ್ದು.''

ಇಂದಿರಾತನಯ

16 other products in the same category:

Product added to compare.