ಡಾ. ಕೆ.ಎನ್. ಗಣೇಶಯ್ಯ. / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :168
ಪುಸ್ತಕದ ಸಂಖ್ಯೆ : 344
ISBN :
Reference: ಶಾಂತಿ ಕೆ. ಅಪ್ಪಣ್ಣ
ಶಾಂತಿ ಕೆ. ಅಪ್ಪಣ್ಣ / Shanti k. appanna
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :152
ಪುಸ್ತಕದ ಸಂಖ್ಯೆ : 964
ISBN :978-93-48262-92-8
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಇತಿಹಾಸದ ಪುಟಗಳಲ್ಲಿರದ ಹೆಸರುಗಳು, ಬದುಕು ನಿಕೃಷ್ಟವಾಗಿ ನಡೆಸಿಕೊಳ್ಳುವ ಸಾಧಾರಣ ಜೀವಗಳು ಮತ್ತು ಲೋಕದ ರೀತಿಗೆ ಅರ್ಥವಾಗದ, ಲೋಕದ ರೀತಿಗೆ ಒಗ್ಗಲಾಗದ ಜೀವಗಳು ಇಲ್ಲಿನ ಕಥಾನಾಯಕ ನಾಯಕಿಯರು. ಇಂತಹ ಜೀವಗಳು ಹಾಗೇ ಇದ್ದು, ಇದ್ದದ್ದು ಗೊತ್ತೇ ಆಗದೇ ಬದುಕಿ ಹೋಗಿಬಿಡುವುದು ಒಂದು ಬಗೆಯಾದರೆ-ಯಾವುದೋ ಬಿಂದುವಿನಲ್ಲಿ, ತಿರುವಿನಲ್ಲಿ ಎಲ್ಲವನ್ನೂ ಮೀರಿ ಸಾಧಾರಣ ಜೀವಗಳು ಅಸಾಧಾರಣವಾಗಿಬಿಡುವ ಸಾಧ್ಯತೆ ಮತ್ತೊಂದು. ಈ ಎರಡೂ ಬಗೆಯನ್ನು ಇಲ್ಲಿನ ಕತೆಗಳು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ.
ಇಲ್ಲಿನ ಕತೆಗಳಿಗೆ ಮನುಷ್ಯರ ಮುಖವಾಡ ಕಳಚಿದೆನೆಂಬ ದಾರ್ಷ್ಟ್ಯವಿಲ್ಲ, ಬದಲಾಗಿ, ಹಿಂದೆ ಕಾಡಿನಲ್ಲಿ ವಾಸಿಸುತ್ತಾ ಅನಾಗರಿಕರಾಗಿದ್ದ ಮನುಷ್ಯರು ನಾವು ಊರು ಕಟ್ಟಿ ನಾಗರಿಕರಾದ ಮೇಲೂ ಒಳಗಿನಿಂದ ನಿಜವಾಗಿಯೂ ಮನುಷ್ಯರಾಗಿದ್ದೇವೆಯೇ? ಒಳ್ಳೆಯ ಬಟ್ಟೆ ಹಾಕಿಕೊಂಡು, ಸೆಂಟು ಹೊಡೆದುಕೊಂಡು ಹೊರಗೆ ಘಮಗುಟ್ಟುವ ಮನುಷ್ಯರು ಒಳಗಿನಿಂದಲೂ ನಾತಮುಕ್ತರಾಗಿದ್ದೇವಾ? ಎಂದು ನಮಗೆ ನಾವೇ ಯೋಚಿಸುವಂತೆ ಮಾಡುತ್ತವೆ.
ಚಿತ್ರಕಾರನ ಬೆರಳಿನಂತೆಯೇ ಶಾಂತಿ ಕೆ. ಅಪ್ಪಣ್ಣ ಕತೆಗಳ ನಿರೂಪಣೆ ಒಂದು ಜಾದೂ ಬೆರಳಿನಿಂದ ಮೂಡಿಬಂದಂತೆ ಇವೆ ಮತ್ತು ಅವು ಸಾಮಾಜಿಕ ಬದುಕಿನಲ್ಲಿ ಹಾಕಿಕೊಂಡ ಚೌಕಟ್ಟನ್ನು ಮೀರಿ, ನಾಗರಿಕ ಜಗತ್ತಿನ ನಿಯಮಗಳ ದಾಟಿ, ಸಮಾಜವೆಂಬ ದೇಹದ ನಿರ್ಬಂಧಿತ ಭಾಗಗಳನ್ನು ಮುಟ್ಟುತ್ತವೆ. ಕತೆಗಾರ್ತಿ ಆ ಭಾಗದ ಗಾಯಗಳನ್ನು ನೇವರಿಸುತ್ತಲೇ, ಓದುಗರನ್ನು ಬೆಚ್ಚಿಸುತ್ತಾರೆ.
- ಕುಸುಮಾ ಆಯರಹಳ್ಳಿ