ಅ.ರಾ. ಮಿತ್ರ / A. R. Mithra
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 88
ISBN :
ಪುಸ್ತಕದ ಸಂಖ್ಯೆ :406
Reference: ಮೌನೇಶ ಬಡಿಗೇರ
ಮೌನೇಶ ಬಡಿಗೇರ / Mounesha Badigera
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 416
ಪುಸ್ತಕದ ಸಂಖ್ಯೆ : 915
ISBN :978-81-972246-9-0
Your payments are 100% secure
Delivery between 2-8 days
No returns accepted, Please refer our full policy
ತನ್ನ ಕಾಲದ ಹಲವು ಬಗೆಯ ಒತ್ತಡಗಳನ್ನು ಒಳಗೊಂಡು, ಅರಗಿಸಿಕೊಂಡ ನಂತರವೂ ಸೃಜನ ಶೀಲತೆಯ ಹೊಸ ಹಾದಿಗಳನ್ನು ಹುಡುಕುವ, ಸರ್ವರ ಸಮ್ಮತ, ಸಂತೆಯ ದಾರಿ'ಯನ್ನು ಅನುಸರಿಸದ ಲೇಖಕರು ಮಾತ್ರವೇ ಒಂದು ಭಾಷೆಯ ಸಾಹಿತ್ಯವನ್ನು ಕಟ್ಟಬಲ್ಲರು. ರಂಗಭೂಮಿ, ಚಲನಚಿತ್ರ,'ಜೀವಂತ' ಜೀವನ ಮುಂತಾದ ಹತ್ತು ಹಲವು ಸಂಗತಿಗಳಲ್ಲಿ ತೀವ್ರವಾದ ಆಸಕ್ತಿಗಳನ್ನು ಹೊಂದಿರುವ ಗೆಳೆಯ ಮೌನೇಶ ಬಡಿಗೇರ್ ಅವರು ಅಂತಹ ಕೆಲವು ತರುಣ-ತರುಣಿಯರಲ್ಲಿ ಒಬ್ಬರು. ಕಥೆ,ಕವಿತೆ,ಕಾದಂಬರಿ ಮುಂತಾದ ಪ್ರಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧನೆ'ಗಳನ್ನು ಅವಲಂಬಿಸಿರುತ್ತದೆ .ಇವುಗಳ ಜೊತೆಗೆ, ಜಡವಲ್ಲದ ಕೇವಲ ಬೌದ್ಧಿಕವಲ್ಲದ ತಾತ್ವಿಕ ಕುತೂಹಲ/ ಚಿಂತನೆಯೂ ಅದಕ್ಕೆ ಅಗತ್ಯವಾದ ಇನ್ನೊಂದು ಗುಣ. ಇದೆಲ್ಲದರ ಸಂಗಡ ಕತೆಗಾರನಿಗೆ ಲೋಕವನ್ನು ಅದರ ಸ್ಥೂಲನೆಲೆಯಲ್ಲಿ ಮಾತ್ರವಲ್ಲ, ವಿವರಗಳಲ್ಲಿ ಕಾಣುವ ಗುಣವೂ ಬೇಕು. 'ಮೂರ್ತ ಮತ್ತು 'ಅಮೂರ್ತ' ಒಟ್ಟಿಗೆ ಗ್ರಹಿಸುವ,ಒಟ್ಟಾಗಿ ಹೆಣೆಯುವ ಕೆಲಸ ಬಹಳ ಜಟಿಲವಾದುದು. ಮೌನೇಶ್ ಈ ಎಲ್ಲ ಶಕ್ತಿಗಳನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಪಡೆದಿದ್ದರೆ. ಆದ್ದರಿಂದ ಅವರ ಈ ಕಾದಂಬರಿ ನನಗೆ ಇಷ್ಟವಾಯಿತು, ನನ್ನನ್ನು ಬೆಳೆಸಿತು. ನಾನು ಅವರ ಕಥೆ, ಕವಿತೆಗಳನ್ನೂ ಪ್ರೀತಿಯಿಂದ ಓದಿದ್ದೇನೆ.
-ಎಚ್,ಎಸ್ ರಾಘವೇಂದ್ರ ರಾವ್