• New product

ಸುಮಾರು ವರ್ಷಗಳಿಂದ ಕನ್ನಡದ ಖ್ಯಾತ ಲೇಖಕರಾದ ಕೇಶವರೆಡ್ಡಿ ಹಂದ್ರಾಳರ ಕಥೆಗಳನ್ನು ಅನೇಕ ನಿಯತಕಾಲಿಕಗಳಲ್ಲಿ ಮತ್ತು ಸಂಕಲನಗಳಲ್ಲಿ ಓದುತ್ತಾ ಬಂದಿರುವ ನನಗೆ ಹಂದ್ರಾಳರು ತಮ್ಮ ಕಥಾ ಪಾತ್ರಗಳಲ್ಲಿ ಪರಕಾಯಪ್ರವೇಶ ಮಾಡುವ ರೀತಿ ಅತ್ಯಂತ ಸೋಜಿಗವನ್ನುಂಟು ಮಾಡುತ್ತದೆ. 

ನಲವತ್ತು ವರ್ಷಗಳಿಂದಲೂ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯ,ಕಥೆ, ಪ್ರಬಂಧ,ಕಾದಂಬರಿ, ಲೇಖನಗಳ ಕೃಷಿಯಲ್ಲಿ ತೊಡಗಿಕೊಂಡಿರುವ ಕೇಶವರೆಡ್ಡಿ ಹಂದ್ರಾಳರು ಈಗಲೂ ದಣಿವರಿಯದೆ ಬರೆಯುತ್ತಿರುವುದು ಅವರ ಕ್ರಿಯಾಶೀಲ ಸಾಹಿತ್ಯ ಕೃಷಿಯ ನಿರಂತರ ಅನನ್ಯತೆಗೆ ಸಾಕ್ಷಿಯಾಗಿದೆ. ಹಂದ್ರಾಳರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದರೂ ಓದುಗರನ್ನು ದಟ್ಟವಾಗಿ ಆವರಿಸಿಕೊಳ್ಳುವುದು ಅವರ ಕಥನ ಕಲೆಯ ಮೂಲಕವೇ. ಹೆಣ್ಣು,ಕಣ್ಣೀರು,ಹಸಿವು ಮತ್ತು ಕಾಮ ಹಂದ್ರಾಳರ ಕಥನ ಕ್ರಿಯೆಯ ಮೂಲದ್ರವ್ಯಗಳೆಂಬುದು ಅವರ ಸಾಹಿತ್ಯದಲ್ಲಿ ಪ್ರಕಟವಾದ ಸತ್ಯ. ಅತ್ಯಂತ ವಾಸ್ತವ ನೆಲೆಗಟ್ಟಿನಲ್ಲಿ ಅವರು ಹೆಣ್ಣನ್ನು ಚಿತ್ರಿಸುವ ಪರಿ ನಿಜಕ್ಕೂ ಇದುವರೆಗಿನ ಸ್ತ್ರೀ ಸಾಹಿತ್ಯಕ್ಕೂ ಸಾಧ್ಯವಾಗಿಲ್ಲವೆನಿಸುತ್ತದೆ! ಕಥೆಗಳ ಮೂಲಕ ಹೆಣ್ಣಿನ ಲೋಕವನ್ನು ಪ್ರವೇಶಿಸಿ, ಹೆಣ್ಣಿನ ಸಮಗ್ರ ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವ ಹಂದ್ರಾಳರಿಗೆ ಹಂದ್ರಾಳರೇ ಸಾಟಿ. ಇವರ ಕಥನಶೈಲಿ ಸೂಕ್ಷ್ಮವೂ, ವೈನೋದಿಕವೂ ಆಗಿರುವುದನ್ನು ಕಾಣಬಹುದು. ಓದುಗಳಾದ ನನ್ನಿಂದ ಈ ಸಂಕಲನಕ್ಕೆ ಬೆನ್ನುಡಿಯನ್ನು ಬರೆಸಿರುವ ಹಂದ್ರಾಳರ ಸರಳ ಹಿರಿತನಕ್ಕೆ hats off.

                                                                                                                                                                                              - ಸಿರಿಧರೆ ಗೀತಾ ನಾಗರಾಜ್ 

ಕೇಶವರೆಡ್ಡಿ ಹಂದ್ರಾಳ

16 other products in the same category:

Product added to compare.