"ಪರಮಾತ್ಮನ ಪವಿತ್ರ, ಧನ್ಯ ಸೃಷ್ಟಿಗಳಲ್ಲೊಂದು ಪ್ರೀತಿ, ಇನ್ನೊಂದು ಋಣ. ಪ್ರತಿಯೊಂದು ಜೀವಿ ತಾನು ಸವಿದ ಸಕ್ಕರೆ, ಉಪ್ಪಿನ ರಸಸೃಷ್ಟಿ ತನ್ನ ಜೊತೆ ಒಯ್ದು ಪರಮಾತ್ಮನಿಗೆ ಮುಟ್ಟಿಸಲೇಬೇಕು. ಪ್ರೀತಿಯ ಋಣ ತೀರಿಸುವಂಥದ್ದಲ್ಲ" ಎನ್ನುವ ಸುನಂದಾ ಬೆಳಗಾಂವಕರ ಕನ್ನಡ ಲಲಿತ ಪ್ರಬಂಧ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅಂತಃಕರಣವನ್ನು ತಟ್ಟುವ ಅವರ ಬರಹಗಳ ಸವಿಯನ್ನು ಓದಿದವರೇ ಬಲ್ಲರು. "ಕೈತುತ್ತು" ಅಜ್ಜಿಯಂಥ ವ್ಯಕ್ತಿತ್ವಗಳ ಪ್ರೀತಿ, ಅಂತಃಕರಣ, ವಾತ್ಸಲ್ಯಗಳ ಮನಮುಟ್ಟುವ ಚಿತ್ರಣವನ್ನು ನೀಡುವ ಲಲಿತ ಪ್ರಬಂಧಗಳ ಸಂಕಲನ.

ಸುನಂದಾ ಬೆಳಗಾಂವಕರ

16 other products in the same category:

Product added to compare.