ಪುರುಷ ಪುರುಷೋತ್ತಮನಾದ ಕಥೆ 

ಭಾರತ ಭಾಗವತಗಳನ್ನು, ಕವಿಯಾಗಿ ಅಧ್ಯಯನಮಾಡಿ, ಅರ್ಥೈಸಿಕೊಂಡ ಶ್ರೀ ಸು.ರುದ್ರಮೂರ್ತಿಶಾಸ್ತ್ರಿಗಳು, ಶ್ರೀಕೃಷ್ಣನನ್ನು ಈ ದೃಷ್ಟಿಯಿಂದ ಜಗದ್ಗುರುವಾಗಿ ನೋಡಿದರೋ ಏನೋ.ಶ್ರೀ ಕೃಷ್ಣನ ಅಂತರಂಗವನ್ನು ಪ್ರವೇಶಿಸಿ, ಶ್ರೀಕೃಷ್ಣ ಪುರುಷೋತ್ತಮನಾದುದನ್ನು  ಈ ಕಾದಂಬರಿಯ ಮೂಲಕ, ಸಹಜವಾಗಿ ನಿರೂಪಿಸುತ್ತಾ ಹೋಗಿದ್ದಾರೆ. ಶ್ರೀಕೃಷ್ಣ ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯನಾಗಿ ಹುಟ್ಟಿದವನೆ. ಆತನು ಸಾಮಾನ್ಯ ಮಾನವ ಧರ್ಮವನ್ನು ಅನುಸರಿಸುತ್ತಾ,ಪ್ರತಿಯೊಬ್ಬರಿಂದ ಒಂದೊಂದು ಮಾನವೀಯತೆಯ ಪಾಠಗಳನ್ನು ಕಲಿಯುತ್ತಾ, ಅವುಗಳನ್ನು ತನ್ನ ನಿಜಜೀವನದಲ್ಲಿ ಅನುಸರಿಸಿ,ಸಾಕ್ಷಾತ್ಕಾರ  ಮಾಡಿಕೊಳ್ಳುತ್ತಾ, ತನ್ನನ್ನು ತಾನು ವಿಮರ್ಶಿಸಿಕೊಳ್ಳುತ್ತಾ ಬೆಳೆದಿದ್ದಾನೆ. ಈ ರೀತಿ ಪ್ರತಿಯೊಬ್ಬ ಮಾನವನೂ ಪುರುಷೋತ್ತಮನಾಗಬಹುದು ಎಂಬುದು ಈ ಕಾದಂಬರಿ ನಮಗೆ ನೀಡುವ ಸಂದೇಶ ಎಂದು ನಾನಾದರೂ ಭಾವಿಸಿದ್ದೇನೆ.

                                                                                                                                                                                                       -ಆರ್ ಶೇಷಶಾಸ್ತ್ರಿ 

ಸು. ರುದ್ರಮೂರ್ತಿ ಶಾಸ್ತ್ರಿ

16 other products in the same category:

Product added to compare.