ಸುಮಾರು ಎಂಟೂವರೆ ದಶಕದ ಇತಿಹಾಸ ಹೊಂದಿರುವ ಕನ್ನಡ ಸಿನಿಮಾ ಪರಂಪರೆ ಕನ್ನಡ ಸಂಸ್ಕೃತಿಯೊಂದಿಗೆ ಹೊಂದಿರುವ ಸಂಬಂಧ ಯಾವ ರೀತಿಯದು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಾಟದ ರೂಪದಲ್ಲಿ `ಬೆಳ್ಳಿತೊರೆ'ಯ ಬರಹಗಳು ರೂಪುಗೊಂಡಿವೆ. ಇವುಗಳ ಮುನ್ನೆಲೆಯಲ್ಲಿರುವುದು ಸಿನಿಮಾ ರಸಾಸ್ವಾದವೇ ಹೊರತು, ವಿಮರ್ಶೆಯಲ್ಲ. ಬಾಲ್ಯದ ಟೆಂಟ್ ಸಿನಿಮಾಗಳಿಂದ ಇವತ್ತಿನ ಮಲ್ಟಿಫ್ಲೆಕ್ಸ್ ಸಿನಿಮಾಗಳವರೆಗೆ ಉಳಿದುಬಂದಿರುವ ಸಿನಿಮಾಪ್ರೇಮದ ಪ್ರತಿಬಿಂಬಗಳು `ಬೆಳ್ಳಿತೊರೆ'ಯ ಪ್ರಬಂಧಗಳು. ಪತ್ರಕರ್ತ ಹಾಗೂ ಲೇಖಕ ಚ.ಹ. ರಘುನಾಥ್ ರವರ ಈ ಬರಹಗಳು ಲಲಿತ ಪ್ರಬಂಧಗಳಂತೆ ಓದಿಸಿಕೊಂಡು ಹೋಗುತ್ತವೆ.

ರಘುನಾಥ ಚ.ಹ.

16 other products in the same category:

Product added to compare.