"ಕನ್ನಡದ ಓರ್ವ ಹಿರಿಯ-ಧೀಮಂತ ಲೇಖಕರಾಗಿ ಶ್ರೀ ಅನಂತಮೂರ್ತಿ ಕಳೆದ ಸುಮಾರು ನಾಲ್ಕು ದಶಕಗಳಿಂದ ಕಥೆ, ಕಾವ್ಯದ ಮೂಲಕ ಮಾತ್ರವಲ್ಲದೆ ಸೃಜನಶೀಲ ಚಿಂತನೆಯಿಂದ ನಮ್ಮ ಸುತ್ತಲಿನ ವಿದ್ಯಮಾನಗಳನ್ನು ಗಾಂಧೀ-ಲೋಹಿಯಾ ಪ್ರಣೀತವೆನ್ನಬಹುದಾದ ನೆಲೆಯೊಂದರಿಂದ ತಮ್ಮದೇ ಆದ ವಿಶಿಷ್ಟ ವಾರೆನೋಟದಲ್ಲಿ ಕಾಣುತ್ತಾ, ನಮ್ಮ ನಾಡಿನ ಶಿಕ್ಷಿತ ಮಧ್ಯಮ-ಮೇಲ್ಮಧ್ಯಮ ವರ್ಗದ ಸಾಕ್ಷಿಪ್ರಜ್ಞೆಯ ರೂಪದಲ್ಲಿ ನಮ್ಮನ್ನು ಕೆಣಕುತ್ತಾ, ಟೀಕಿಸುತ್ತಾ, ವಿಮರ್ಶಿಸುತ್ತಾ `ಬೆತ್ತವ ಪಿಡಿದ' ಹಿರಿಯ ಶಿಕ್ಷಕನಂತೆ ನಮ್ಮ ಕೈ-ಹಿಡಿದು ನಡೆಸುತ್ತಿದ್ದಾರೆ."-ಸುದರ್ಶನ ಪಾಟೀಲ ಕುಲಕರ್ಣಿ.                                                                                                                                                                                                               ಅನಂತಮೂರ್ತಿಯವರ ಅಪೂರ್ವ ಚಿಂತನೆಯ ಲೇಖನಗಳ ಸಂಗ್ರಹ ಇದು .

ಯು.ಆರ್. ಅನಂತಮೂರ್ತಿ

16 other products in the same category:

Product added to compare.