ಧಾರವಾಡದ ಮೃದ್ಗಂಧ ವನ್ನು ಅಂತರಂಗದಲ್ಲಿ ತುಂಬಿಟ್ಟುಕೊಟ್ಟಂತಹ ಬರವಣಿಗೆಯ ವಿಶಿಷ್ಟ ಲೇಖಕಿ ಸುನಂದಾ ಬೆಳಗಾಂವಕರ. ಪ್ರಾದೇಶಿಕ ಸಂವೇದನೆಯ ನೆಲೆಯಲ್ಲೇ ವಿಶಾಲ ಪ್ರಪಂಚವನ್ನು ತಮ್ಮ ಕೃತಿಗಳಲ್ಲಿ ತಂದವರು ಇವರು.

     ತಮ್ಮ ಕಾದಂಬರಿ 'ಕಾಯಕ ಕೈಲಾಸ' ವನ್ನು ಕುರಿತು ಲೇಖಕಿಯ ಮಾತುಗಳು ಹೀಗಿವೆ:

ಕಾಯಕದ ಮುಖ್ಯ ತತ್ವ ಪ್ರತಿಯೊಬ್ಬ ಮನುಷ್ಯನು ತಾನು ದುಡಿದದ್ದಕ್ಕೆ ತಕ್ಕ ಪ್ರತಿಫಲ ಪ್ರಾಮಾಣಿಕವಾಗಿ ಪಡೆಯಬೇಕು. ಆದರೆ ದುಡಿಯದೆ ದುಡ್ಡು ಗಳಿಸಬೇಕೆಂಬ ವ್ಯವಸ್ಥೆಯಲ್ಲಿ ಈಗಿನ ಕಾಲದವರು ಇರುವಾಗ- ಬಸವಣ್ಣನವರ ಕಾಯಕ ತತ್ವದ ಶಿವಭಕ್ತಿ, ದೃಷ್ಟಾಂತ, ಸಾಕ್ಷಾತ್ಕಾರಗಳ ಮಹಿಮೆ, ಈ ತರಹದ ಚಿಂತನೆಗಳ ಕಾದಂಬರಿ ಜನ ಮೆಚ್ಚಬಹುದೇ? ಎಂದು ನನಗನಿಸಿತ್ತು. ಆದರೆ ಅದನ್ನು 'ಕಾಯಕ ಕೈಲಾಸ' ಸುಳ್ಳಾಗಿಸಿತು. ಜೀವನದ ಮೌಲ್ಯಗಳು ಬಂಗಾರದಂತೆ ಚೊಕ್ಕ. ಅವು ಎಂದೂ ಮಾಸುವುದಿಲ್ಲ. ಅವುಗಳನ್ನು ಆರಾಧಿಸುವ ಜನ ಇದ್ದಾರೆ. ಹುಟ್ಟುತ್ತಲೇ ಇರುತ್ತಾರೆ. ಅಂಥವರಿಂದಲೇ ಸಮಾಜದ ಕಲ್ಯಾಣವಾಗುತ್ತಲೇ ಇರುತ್ತವೆ. ಇದು ನನ್ನ ಅನುಭವ.

ಸುನಂದಾ ಬೆಳಗಾಂವಕರ

16 other products in the same category:

Product added to compare.