`ರಾಜನೀತಿ'ಯಲ್ಲಿ ಇಂದಿಗೂ ತನ್ನ ಪ್ರಾಮುಖ್ಯವನ್ನು ಕಾಪಾಡಿಕೊಂಡು ಬಂದಿರುವ ಕೃತಿ "ಕೌಟಲೀಯ ಅರ್ಥಶಾಸ್ತ್ರ". ಕೃತಿ ರಚನೆಗೊಂಡು ಸುಮಾರು ಎರಡು ಸಾವಿರ ವರ್ಷಗಳೇ ಸಂದಿದ್ದರೂ ಇದೀಗ ರಚನೆಯಾಗಿದೆಯೇನೋ ಎಂಬಂತೆ ಓದಿಸಿಕೊಂಡು ಹೋಗುತ್ತದೆ. "ಕೌಟಲೀಯ ಅರ್ಥಶಾಸ್ತ್ರ"ದ ಕೃತಿಕಾರನ ಅಪಾರ ಪಾಂಡಿತ್ಯ, ಆಳವಾದ ಅನುಭವ, ರಾಜಕೀಯ ಕುಟಿಲತೆ, ಚಾಣಾಕ್ಷ್ಯತನ ಅಚ್ಚರಿ ಮೂಡಿಸುತ್ತದೆ. ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡಿರುವ ಈ ಕೃತಿಯ ಅಧ್ಯಯನ ಬೆರಗು ಮೂಡಿಸುತ್ತದೆ. ಅಪಾರ ಪಾಂಡಿತ್ಯವುಳ್ಳ ಅಗಾಧ ಸಾಹಿತ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ತಂದ ಶೃಂಗೇರಿ ಜಗದ್ಗುರು ಶ್ರೀ ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು "ಕೌಟಲೀಯ ಅರ್ಥಶಾಸ್ತ್ರ" ವನ್ನು ಪಾಂಡಿತ್ಯಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿ ಉಪಕರಿಸಿದ್ದಾರೆ.

ಅನು:ಶ್ರೀ ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು

16 other products in the same category:

Product added to compare.