ನೊಬೆಲ್ ಪಾರಿತೋಷಕ ಪುರಸ್ಕೃತ ಜಪಾನಿ ಕಾದಂಬರಿ ಸಾವಿರ ಪಕ್ಷಿಗಳು, ಇದರ ಲೇಖಕ ಯಸುನಾರಿ ಕವಬಾಟ ಜಪಾನ್ ದೇಶದ ಪ್ರಮುಖ ಬರಹಗಾರರಲ್ಲೊಬ್ಬರು. ಇವರ ಕಾದಂಬರಿ  'ಸೆನ್ಬಜುರು' ಇಂಗ್ಲೀಷ್ಗೆ 'ಥೌಸಂಡ್ ಕ್ರೇನ್ಸ್' ಎಂಬ ಹೆಸರಿನಲ್ಲಿ ಅನುವಾದ ಗೊಂಡಿದ್ದು ಇಂಗ್ಲೀಷ್ ಮೂಲಕ ಕನ್ನಡಕ್ಕೆ ಬಂದಿದೆ. ಈ ಕೃತಿಯನ್ನು ಕುರಿತು ಪ್ರಸಿದ್ಧ ಲೇಖಕರಾದ ಎನ್, ಎಸ್, ಲಕ್ಷ್ಮೀನಾರಾಯಣಭಟ್ಟರು ಹೀಗೆ ಹೇಳಿದ್ದಾರೆ.

    ಯಸುನಾರಿ ಕವಬಾಟ ಬರೆದ 'ಸಾವಿರ ಪಕ್ಷಿಗಳು' ಕೃತಿ ಚಿಕ್ಕದಾದರೂ ಬಹಳ ಸೊಗಸಾದ ಕಿರುಕಾದಂಬರಿ. ತುಂಬ ಸರಳವೂ ಅಷ್ಟೇ ವಚನೀಯವೂ ಆದ ಈ ಕೃತಿ ಕಾವ್ಯಸತ್ಯದಿಂದ ಕೂಡಿದ್ದು, ಒಂದು ದೀರ್ಘ ಕವಿತೆ ಎಂಬಷ್ಟು ಮನೋಹರವಾಗಿದೆ. ಸಾಮಾನ್ಯ ನಿರೀಕ್ಷೆಗಳಿಗೆ ಹೊರತಾಗಿ ಹರಿಯುವ ಇಲ್ಲಿಯ ಕಥೆ ಗಂಡು ಹೆಣ್ಣಿನ ನಡುವಿನ ಪ್ರಣಯಭಾವದ ಮೇಲೆ ಆಧರಿಸಿದ್ದು, ನಿರೂಪಣೆ ಧ್ವನಿಪೂರ್ಣವೂ ಮನೋಜ್ಞವೂ ಆಗಿದೆ. ' ಪಶ್ಚಿಮಾಯಣ' ಕೃತಿಯಿಂದ ಕನ್ನಡಿಗರಿಗೆ ಚೆನ್ನಾಗಿ ಪರಿಚಿತರಾಗಿರುವ ಶ್ರೀ ಕೃಷ್ಣಾರಾಜು ಅವರ ಈ ಅನುವಾದ ಕನ್ನಡ ಅನುವಾದ ಕ್ಷೇತ್ರಕ್ಕೆ ಒಂದು ವಿಶಿಷ್ಟ ಕೊಡುಗೆ''. 

ಅನು:ಟಿ.ಎನ್. ಕೃಷ್ಣರಾಜು

16 other products in the same category:

Product added to compare.