ನಾ. ಕಸ್ತೂರಿ ಹಾಸ್ಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದವರು. ಕನ್ನಡ ಹಾಸ್ಯ ಸಾಹಿತ್ಯಕ್ಕೊಂದು ರೂಪ ಕೊಟ್ಟವರು. ಅವರೀಗ ಇಲ್ಲದಿದ್ದರೂ ಅವರು ಬೀರಿದ ಹಾಸ್ಯದ ಪರಿಮಳ ಇಂದೂ ಗಮಗಮಿಸುತ್ತಿದೆ. ಅನರ್ಥಕೋಶದಂತಹ ಒಂದು ಹಾಸ್ಯ "ಶಬ್ದಕೋಶ" ಯಾವ ಭಾಷೆಯಲ್ಲೂ ಇಲ್ಲ. ಅವರದೇ ಮಾತಿನಲ್ಲಿ ಹೇಳುವುದಾದರೆ `ಕನ್ನಡಂ ಕತ್ತುರಿಯಲ್ತೆ' ಎಂದು ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡ ಕನ್ನಡ ತಾಯಿಗೆ ಇದು ಒಂದು ಕುಹಕದ ಕಾಣಿಕೆ! ಅಳಿಲುಸೇವೆ. ಹೊಕ್ಕ ಮನೆಯನ್ನು ಚೊಕ್ಕಮಾಡಲು ನಾನು `ಕುಕ್ಕು' ಮಾಡಿದ ಒಂದು ಬುಕ್ಕು.

ನಾ. ಕಸ್ತೂರಿ

16 other products in the same category:

Product added to compare.