ಇದು ವಚನಕಾರ ಕನ್ನದ ಮಾರಯ್ಯನನ್ನು ನೆನಪಿಸುವ ಕನ್ನಮಾರಿ ಜನಾಂಗಕ್ಕೆ ಸೇರಿದ ಕನ್ನಮರಿ ಎಂಬ ಹುಡುಗನ ಕಥೆ.ಶಾಲೆ ಕಲಿತ ಹುಡುಗ ಕಾನುಸೀಮೆಯ ತನ್ನ ನೆಲೆ ಬಿಟ್ಟು ಅಕ್ಷರದ ಹಾದಿಯಲ್ಲಿ ನಗರ ಸೇರಿ ಅನೇಕ ವಿಲಕ್ಷಣ ಅನುಭವಗಳ ಬಳಿಕ ತಿರುಗಿ ತನ್ನ ಪೂರ್ವ ನೆಲೆಗೆ ಮರಳಿ ಬರುವ ಒಗಟಿನಂಥ ಬದುಕಿನ ಕಥನವಿದು.ಒಂದರ್ಥದಲ್ಲಿ ಧರ್ಮ,ಅರ್ಥ,ಕಾಮ,ಮೋಕ್ಷವೆಂಬ ನಾಲ್ಕೂ ಪುರುಷಾರ್ಥಗಳನ್ನು ನಿರಾಕರಿಸಿ ಬದುಕನ್ನು ಮತ್ತೊಮ್ಮೆ ಆರಂಭದಿಂದ ಕಟ್ಟಿಕೊಳ್ಳಲು  ಹೊರಟ ಯುವಕನ ಕಥೆಯಿದು ಎನ್ನಬಹುದು. ಇನ್ನೊಂದರ್ಥದಲ್ಲಿ ಈ ಪುರುಷಾರ್ಥಗಳ ಬಾಹ್ಯರ್ಥವನ್ನು ಮಾತ್ರ ಕಂಡರಿತ ಕನ್ನಮರಿ ಅವುಗಳ ಅಂತರಾರ್ಥದ ಕಡೆಗೆ ತಿರುಗಲು ನಿರ್ಧರಿಸಿದ ಕಥೆ ಎಂದೂ ಹೇಳಬಹುದು.ತನ್ನ ವಿದ್ಯಾರ್ಥಿಯಾಗಿದ್ದ ಕನ್ನಮರಿಯನ್ನು ಹಲವು ನೆಲೆಗಳಲ್ಲಿ ಹುಡುಕುತ್ತ ಹೊರಟ ಗುರುನಾಥ ಉಪಾಧ್ಯರ ಅನುಭವಗಳ ಮೂಲಕ ಮುಂದೆ ಸಾಗುವ ಕೃತಿ ತನ್ನ ಸರಳತೆಯಲ್ಲೇ ಅನನ್ಯವಾದ ಭಾವಪ್ರಪಂಚವೊಂದನ್ನು ಕಟ್ಟಿಕೊಡುತ್ತದೆ.ಹನೂರರ 'ಕನ್ನಮರಿ' ಕನ್ನಡ ಕಾದಂಬರಿ ಕ್ರಮವನ್ನು ಎತ್ತರಕ್ಕೆ ಏರಿಸುವ ಮಹತ್ವದ ರಚನೆಯಾಗಿದೆ ಹನೂರರ ಹಾಗೆ ಕನ್ನಡ ವಾಙ್ಮಯ ಲೋಕವನ್ನು ಆಳದಿಂದ ಬಲ್ಲವರು ವಿರಳ. ಈ ಕೃತಿ ಅವರ ಸಹಜ ಕಥನಕಲೆಗೆ ಮಾತ್ರ ಸಾಧ್ಯವಾಗುವ ಸಾಧನೆ.

                                                                                                                                                                                           -ಮನು ವಿ ದೇವದೇವನ್ 

ಕೃಷ್ಣಮೂರ್ತಿ ಹನೂರು

16 other products in the same category:

Product added to compare.